ಮಹಾಭಾರತ ಓದುತ್ತಿದ್ದಾರಂತೆ ಶಾರೂಖ್ ಖಾನ್!!

ಮುಂಬೈ: ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಕಳೆದ ಒಂದೂವರೆ ವರ್ಷದಿಂದ ಮಹಾಭಾರತ ಓದುತ್ತಿದ್ದಾರಂತೆ! ಹಿಂದೂಗಳ ಪುರಾಣ ಕತೆಯೆಂದರೆ ಶಾರುಖ್ ಗೆ ಅಚ್ಚುಮೆಚ್ಚಂತೆ, ಅವಕಾಶ ಒದಗಿ ಬಂದರೆ ಮಹಾಭಾರತದ ಯಾವುದಾದರೂ ಕತೆಯೊಂದನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ಇರಾದೆ ಇದೆ ಎಂದಿದ್ದಾರೆ.
ಶಾರೂಖ್ ಖಾನ್ ಗೆ ಮಹಾಭಾರತದಲ್ಲಿ ಬರುವ ಕಥೆಗಳೆಂದರೆ ಪಂಚ ಪ್ರಾಣವಂತೆ. ಇದೇ ಕಾರಣಕ್ಕೆ ಸೀರಿಯಸ್ ಆಗಿ ಕೂತುಕೊಂಡು ಮಹಾಭಾರತ ಓದುತ್ತಿದ್ದೇನೆ ಎಂದಿದ್ದಾರೆ. ಶಾರುಖ್ ತಮ್ಮ ಪುತ್ರ ನಿಗೂ ಮಹಾಭಾರತ ಕತೆಗಳನ್ನು ಬಹಳ ಇಂಟರೆಸ್ಟಿಂಗ್ ಆಗಿ ಹೇಳುತ್ತಾರಂತೆ. ಹಾಗೇ ಇಸ್ಲಾಂ ಧರ್ಮದಲ್ಲಿರುವ ಕತೆಗಳನ್ನೂ ಮಗನಿಗೆ ಹೇಳುತ್ತೇನೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಪ್ರೀತಿಸಬೇಕು ಎನ್ನುವುದೇ ನನ್ನ ತತ್ವ ಎಂದು ಶಾರುಖ್ ಮುಂಬೈನಲ್ಲಿ ನಡೆದ ಈದ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
Comments