ಮಾನುಷಿ ಛಿಲ್ಲಾರ್ ಗೆ ಮಿಸ್ ಇಂಡಿಯಾ ವರ್ಲ್ಡ್ 2017 ಪಟ್ಟ

27 Jun 2017 11:06 AM | Entertainment
428 Report

ನವದೆಹಲಿ: ಹರಿಯಾಣದ ಬೆಡಗಿ ಮಾನುಷಿ ಛಿಲ್ಲಾರ್ ಗೆ ಮಿಸ್ ಇಂಡಿಯಾ 2017 ಪಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಮ್ಮು ಕಾಶ್ಮೀರದ ಸಾನಾ ಡೂವಾ ಹಾಗೂ ಮಿಸ್ ಬಿಹಾರ ಪ್ರಿಯಾಂಕಾ ಕುಮಾರ್ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.  ಮುಂಬಯಿಯ ಯಶ್ ರಾಜ್ ಫಿಲ್ಮಂ ಸ್ಟುಡಿಯೋದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮಾನುಷಿಗೆ ಮಿಸ್ ಇಂಡಿಯಾ ವರ್ಲ್ಡ್ ವಿಜೇತೆ ಸ್ಟಿಫಾನ್ ಡೆಲ್ ವಾಲ್ಲೆ ಕಿರೀಟ ತೊಡಿಸಿದರು.

ಬಾಲಿವುಡ್ ದಿಗ್ಗಜರಾದ ಅರ್ಜುನ ರಾಮ್ ಪಾಲ್, ಮನೀಶ್ ಮಲ್ಹೊತ್ರಾ, ಇಲಿಯಾನಾ ಡಿ ಕ್ರಜ್, ಬಿಪಾಶಾ ಬಸು ಅಭಿಷೇಕ್ ಕಪೂರ್, ವಿದ್ಯುತ್ ಜಮ್ವಾಲ್ ಮತ್ತು ಮಿಸ್ ಇಂಡಿಯಾ ವರ್ಲ್ಡ್ ಸ್ಟಿಫಾನೇ ಡೆಲ್ ವಾಲ್ಲೆ ಈ ಸ್ಪರ್ಧೆಯ ತೀರ್ಪಗಾರರಾಗಿದ್ದರು. ಬಾಲಿವುಡ್ ತಾರೆಗಳಾದ ಕರಣ್ ಜೋಹಾರ್, ರಿತೇಶ್ ದೇಶ್ ಮುಖ್, ರಣಬೀರ್ ಕಪೂರ್, ಸುಶಾಂತ್ ಸಿಂಗ್ ರಾಜ್ ಪೂತ್, ಆಲಿಯಾ ಭಟ್ ದಿಗ್ಗಜರು ನೆರೆದಿದ್ದ ಸಭಿಕರಿಗೆ ರಸದೌತಣ ನೀಡಿದರು.

Edited By

venki swamy

Reported By

Sudha Ujja

Comments