ಚಿತ್ರಗಳಲ್ಲಿ ನಟಿಸುತ್ತಿಲ್ಲವಾದರೂ ನಟಿ ರೇಖಾ ಮಿಲಿಯನ್ ಡಾಲರ್ ಒಡತಿ?
ಮುಂಬೈ: ಬಾಲಿವುಡ್ ನಟಿ ರೇಖಾ ಕೇವಲ ವೈಯಕ್ತಿಕ ಲೈಫ್ ನಿಂದ ಅಷ್ಟೇ ಸುದ್ದಿಯಾಗಲ್ಲ. ಅವರ ನಿಜ ಜೀವನದಿಂದಲೂ ನಟಿ ರೇಖಾ ಸದಾ ಚರ್ಚೆಯಲ್ಲಿರುತ್ತಾರೆ. ಇಂದಿಗೂ ರೇಖಾ ಅವರ ರಿಯಲ್ ಲೈಫ್ ಸಿಕ್ರೇಟ್ ಇಂದ ಕೂಡಿದೆ. ಅವರ ಜೀವನದಲ್ಲಿ ಮತ್ತೊಂದು ಮಹತ್ವದ ರಹಸ್ಯವಿದೆ. ಅದೆಷ್ಟೋ ಜನರಿಗೆ ಈ ಬಗ್ಗೆ ಗೊತ್ತಿಲ್ಲ.
ಆ್ಯಕ್ಟಿಂಗ್ ಬರುವುದಕ್ಕೂ ಮುನ್ನ ರೇಖಾರ ಬಣ್ಣ ಕಪ್ಪು ಎಂದು ಗೇಲಿ ಮಾಡಲಾಗ್ತಿತ್ತು. ಆದರೆ ನಿಧಾನವಾಗಿ ರೇಖಾ ಸ್ಟಾರ್ ಪಟ್ಟಿಯಲ್ಲಿ ನಲ್ಲಿ ನಂ- ೧ ನಟಿಯಾಗಿ ಹೊರಹೊಮ್ಮಿರುವುದು ನಿಮಗೆಲ್ಲರಿಗೂ ಗೊತ್ತು. ಒಂದು ಕಾಲದಲ್ಲಿ ರೇಖಾ ರಿಗಾಗಿ ಹಲವು ಅಭಿಮಾನಿಗಳು ಹುಚ್ಚರಾಗಿದ್ದರಂತೆ. ಬಾಂದ್ರಾ ಹೌಸ್ ನ ಸಮೀಪದಲ್ಲಿರುವ ಜೀಮ್ ನಲ್ಲಿ ವರ್ಕೌಟ್ ಗಾಗಿ ತೆರಳುತ್ತಿದ್ದ ರೇಖಾರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಹೊರಗಡೆ ಕಾಯುತ್ತಿದ್ದರಂತೆ. ಇಂದಿಗೂ ಕೂಡ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿರುವ ಏಕೈಕ ನಟಿ ರೇಖಾ.
ಸದ್ಯಕ್ಕೆ ರೇಖಾ ಯಾವುದು ಚಿತ್ರ ಮಾಡುತ್ತಿಲ್ಲ, ಬಾಲಿವುಡ್ ಚಿತ್ರಗಳಲ್ಲಿ ನಟನೆ ಮಾಡುವುದನ್ನು ರೇಖಾ ನಿಲ್ಲಿಸಿದ್ದಾರೆ. ಆದರೆ ರೇಖಾ ಅವರ ಜೀವನ ಭವ್ಯವಾಗಿದೆ. ಅಂತರ್ಜಾಲದ ಪ್ರಸ್ತುತ ಮಾಹಿತಿ ಪ್ರಕಾರ, ನಟಿ ರೇಖಾ 40 ಮಿಲಿಯನ್ ಡಾಲರ್ ಆಸ್ತಿಯ ಮಾಲೀಕರಂತೆ. ಮುಂಬೈನ ಬಾಂದ್ರಾದಲ್ಲಿ ಭವ್ಯ ಬಂಗಲೆಯನ್ನು ಹೊಂದಿರುವ ಅವರು, ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಕವಿತೆ ಬರೆಯುವುದು, ಪೇಟಿಂಗ್ ಮಾಡುವುದು ನಟಿ ರೇಖಾಗೆ ತುಂಬಾ ಇಷ್ಟವಾದ ಹವ್ಯಾಸಗಳಲ್ಲಿ ಒಂದು.
Comments