'ದಿ ವಿಲನ್' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ ಹಾಗೂ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಶೂಟಿಂಗ್ ಬ್ಯಾಂಕಾಕ್ ನಲ್ಲಿ ನಡೆಯುತ್ತಿದೆ. ಈ ಮಧ್ಯೆ ನಟ ಸುದೀಪ್ ಪ್ರೇಮ್ ಕೆಲಸದ ವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ. ಚಿತ್ರವನ್ನು ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಬ್ಯಾಕಾಂಕ್ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ಸುದೀಪ್, ಚಿತ್ರೀಕರಣ ಅನುಭವ ಅದ್ಭುತವಾಗಿತ್ತು, ಇಲ್ಲಿನ ವ್ಯವಸ್ಥೆ, ಪ್ರೊಡೆಕ್ಷನ್ ಕೆಲಸ, ಇಡೀ ಚಿತ್ರತಂಡ ಮತ್ತು ತಾಂತ್ರಿಕ ವರ್ಗದ ಕೆಲಸಗಳು ಉತ್ತಮವಾಗಿದ್ದವು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಮುಂದಿನ ೧೦ ದಿನಗಳಲ್ಲಿ ಚೇಸಿಂಗ್ ದೃಶ್ಯಗಳ ಶೂಟ್ ಮಾಡುತ್ತಿದ್ದೇವೆ, ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
Comments