'ಟ್ಯೂಬ್ ಲೈಟ್' ಸಿನಿಮಾ ರಿಲೀಸ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ತೆರೆ ಕಂಡಿದೆ. ಸಲ್ಮಾನ್ ಖಾನ್ ಬಹುನಿರೀಕ್ಷಿತ ಸಿನಿಮಾ ಈದ್ ಹಬ್ಬಕ್ಕೆ ಉಡುಗೊರೆಯಾಗಿ 'ಟ್ಯೂಬ್ ಲೈಟ್' ಚಿತ್ರವನ್ನು ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಲಾಗಿದೆ. ನಿರ್ದೇಶಕ ಕಬೀರ್ ಖಾನ್ ಈ ಚಿತ್ರವನ್ನು ತಮ್ಮ ರೆಗ್ಯೂಲರ್ ಸ್ಟೈಲ್ ನಲ್ಲಿಯೇ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ.
ಪ್ರಮುಖವಾಗಿ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಸಾಧಾರಣ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 1962ರ ಇಂಡೋ-ಸಿನೋ ಯುದ್ಧ ಮತ್ತು ಕ್ರಾಂತಿಯ ಕುರಿತಾದ ಕಥಾವಸ್ತು ಈ ಚಿತ್ರ ಹೊಂದಿದೆ. ಏಕಕಾಲದಲ್ಲಿ 50 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅಮೆರಿಕಾದ 330 ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗಿದೆ, ಇನ್ನು ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ರಿಯಲ್ ಸಹೋದರ ಸೊಹೈಲ್ ಖಾನ್ ಅವರ ತಮ್ಮನ ಪಾತ್ರದಲ್ಲಿ ಸಲ್ಲು ಕಾಣಿಸಿಕೊಂಡಿದ್ದು, ವಿಶೇಷ ಪಾತ್ರದಲ್ಲಿ ಶಾರೂಖ್ ಖಾನ್ ನಟಿಸಿದ್ರೆ, ಹಿರಿಯ ಕಲಾವಿದ ಓಂ ಪುರಿ ಕೂಡ ಈ ಚಿತ್ರದಲ್ಲಿದ್ದಾರೆ.
Comments