ಪುನೀತ 'ಕವಲುದಾರಿ' ಚಿತ್ರದ ಫಸ್ಟ್ ಲುಕ್ ಔಟ್
ಬೆಂಗಳೂರು: ಸ್ಯಾಂಡಲ್ ವುಡ್ ಹೊಸ ಸಿನಿಮಾ ‘ಕವಲು ದಾರಿ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಬಾರಿ ತೆರೆಯ ಮುಂದೆ ಅಲ್ಲದೇ ತೆರೆಯ ಹಿಂದಿನ ಗುರುತರ ಜವಾಬ್ದಾರಿಯನ್ನು ಪುನೀತ್ ಹೊತ್ತಿದ್ದಾರೆ. ತಮ್ಮ ಪಿಆರ್ ಕೆ ಹೊಂಬಾಳೆ ಫಿಲಂಸ್ ಜತೆ ಕೈಜೋಡಿಸಿ ಸಿನಿಮಾ ನಿರ್ಮಿಸಿಸುತ್ತಿದ್ದು. ಕವಲುದಾರಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ನಟ ರಿಷಿ ‘ಕವಲು ದಾರಿ’ ಚಿತ್ರದ ನಾಯಕ, ಈ ಹಿಂದೆ ರಿಷಿ ‘ಆಪ್ ರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ನಟಿಸಿದ್ದರು. ರಿಷಿ ಹುಟ್ಟುಹಬ್ಬದ ನಿಮಿತ್ಯವಾಗಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಿನಿಮಾದಲ್ಲಿ ರಿಷಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನವಿದೆ. ‘ಆಪರೇಷನ್ ಆಲಮೇಲಮ್ಮ’ ಖ್ಯಾತಿಯ ಮನೀಶ್ ರಿಷಿ ಮುಖ್ಯ ಭೂಮಿಕೆಯಲ್ಲಿದ್ದು ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಕ್ಯಾಮರಾ ಇರುವ ಹಲವು ಹೊಸ ಮುಖಗಳನ್ನು ಪರಿಚಯಿಸಲು ಹೊರಟಿದ್ದಾರೆ ಹೇಮಂತ್.
ಈ ಹಿಂದೆ ಅರ್ಧಸತ್ಯ ಎಂಬ ಟೈಟಲ್ ಫಿಕ್ಸ್ ಆಗಿತ್ತು. ಆದರೆ ನಂತರ ಚಿತ್ರದ ಶೀರ್ಷಿಕೆಯನ್ನುಕವಲುದಾರಿ ಎಂದು ಬದಲಾಯಿಸಲಾಯಿತು. ಒಟ್ಟಿನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.
Comments