ಜರ್ಮನ್ ಯುವತಿ ಜತೆ ಸಪ್ತಪದಿ ತುಳಿದ ಉಡುಪಿ ಯುವಕ

ಉಡುಪಿ: ಜರ್ಮನ್ ಮೂಲದ ಯುವತಿ ಜತೆಗೆ ಕರ್ನಾಟಕ ಉಡುಪಿ ಮೂಲದ ಯುವಕರೊಬ್ಬರು ಸಪ್ತಪದಿ ತುಳಿದಿದ್ದಾರೆ. ಭರತಕುಮಾರ್ ಎಂಬುವರು ಜರ್ಮನ್ ಮೂಲದ ರೆಬೆಕಾ ಮರಿಯಾ ಎಂಬಾತರನ್ನು ವರಿಸಿದ್ದಾರೆ.
ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾಗದಲ್ಲಿ ಉದ್ಯೋಗಿ. ರೆಬೆಕಾ ಗ್ಯಾಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತದ ಸಂಸ್ಕೃತಿಯನ್ನು ಇಷ್ಟಪಟ್ಟಿದ್ದ ರೆಬೆಕಾ, ಒಂದೇ ಹಡಗಿನಲ್ಲಿ ಸಂಚರಿಸುತ್ತಾ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ.. ಪೋಷಕರ ಒಪ್ಪಿಗೆ ಮೇರೆಗೆ ಭಾರತೀಯ ಸಂಸ್ಕೃತಿಯಂತೆ ಇವರಿಬ್ಬರ ಮದುವೆ ಉಡುಪಿಯಲ್ಲಿ ನಡೆದಿದೆ.
2 ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡು ಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿತ್ತು. ವರ್ಷದ ಹಿಂದೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಈಗ ಮದುವೆ ನೆರವೇರಿದ್ದು, ಮದುವೆ ಸಂದರ್ಭದಲ್ಲಿ ಇವರಿಬ್ಬರ ಕುಟುಂಬದವರು, ಸಂಬಂಧಿಕರು ಭಾಗಿಯಾಗಿದ್ದರು.
Comments