64ನೇ ಫಿಲ್ಮಂ ಫೇರ್ ಅವಾರ್ಡ್,. ಅನಂತ್ ನಾಗ್ ಅತ್ಯುತ್ತಮ ನಟ

19 Jun 2017 12:56 PM | Entertainment
349 Report

ಹೈದರಾಬಾದ್: 2017ನೇ ಸಾಲಿನ  ದಕ್ಷಿಣ ಭಾರತದ 64ನೇ ಜಿಯೋ ಫಿಲ್ಮಂ ಫೇರ್ ಅವಾರ್ಡ್ ಸಮಾರಂಭ ಹೈದರಾಬಾದ್ ನಲ್ಲಿ ಅಧ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ದಕ್ಷಿಣ ಭಾರತದ ದಿಗ್ಗಜರ ಸಮಾಗಮವೇ ಆಗಿತ್ತು. ಸ್ಯಾಂಡಲ್ ವುಡ್ ನಟರು ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

64ನೇ ಪ್ರಶಸ್ತಿ ಸಮಾರಂಭಕ್ಕೆ ಕನ್ನಡ, ತೆಲಗು, ತಮಿಳು ಹಾಗೂ ಮಲಯಾಳಂ ಸಿನಿಮಾ ರಂಗದ ನಟರು ಪಾಲ್ಗೊಂಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ ಕನ್ನಡದ ತಿಥಿ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಕಿರಿಕ್ ಪಾರ್ಟಿ ಸಿನಿಮಾ  ೫ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಇನ್ನು ರಿಷಬ್ ಶೆಟ್ಟಿ ಅತ್ಯುಚ್ಚಮ ನಿರ್ದೇಶಕ, ರಕ್ಷಿತ್ ಶೆಟ್ಟಿ ವಿಮರ್ಶಕರ ಅತ್ಯುತ್ತಮ ನಟ, ಮತ್ತು ಸಂಯುಕ್ತಾ ಹೆಗಡೆ ಅತ್ಯುತ್ತಮ ನಟಿ ಪ್ರಶಸ್ತಿ ಯನ್ನು ಬಾಚಿಕೊಂಡಿದ್ದಾರೆ.

ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಭಿನಯಕ್ಕೆ ನಟ ಅನಂತ್ ನಾಗ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಸಂದಿದೆ. ಇದೇ ಚಿತ್ರ ವಶಿಷ್ಟ ಸಿಂಹರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ್ರೆ, ಶೃತಿ ಹರಿಹರನ್ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Edited By

venki swamy

Reported By

Sudha Ujja

Comments