‘ಬಾದ್ ಶಾಹೋ’ ಚಿತ್ರ; ಇಲಿಯಾನಾ ಆದ್ಮೇಲೆ ನಟಿ ಇಶಾ ಗುಪ್ತಾ ಪೋಸ್ಟರ್ ರಿಲೀಸ್

ಮುಂಬೈ : ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ನಟಿ 'ಬಾದ್ ಶಾಹೊ' ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ಮಿಲನ್ ಲುಥಾರಿಯಾ ಚಿತ್ರದ ಮತ್ತೊಂದು ಪೋಸ್ಟರ್ ಅನ್ನು ಅಭಿಮಾನಿಗಳಿಗಾಗಿ ರಿಲೀಸ್ ಮಾಡಿದ್ದು, ಪೋಸ್ಟರ್ ನಲ್ಲಿ ಇಶಾ ಗುಪ್ತಾ ಬಿಂದಾಸ್ ಆಗಿ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ, ರೂಪದರ್ಶಿ ಆಗಿರುವ ಇಶಾ ಗುಪ್ತಾ ಮೊದಲ ಬಾರಿಗೆ ಅಜಯ್ ದೇವಗನ್ ಅವರೊಂದಿಗೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರೆಲ್ಲರ ಜತೆ ಕೆಲಸ ಮಾಡುವುದಕ್ಕೆ ನಾನು ಅದೃಷ್ಟಶಾಲಿ, ನಿರ್ದೇಶಕ ಲುಥಾರಿಯಾ ಜತೆಗೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದು ಇಶಾ ಗುಪ್ತಾ ಈ ಹಿಂದೆ ಹೇಳಿದ್ದರು. ಈ ಚಿತ್ರದಲ್ಲಿ ಅಜಯ್ ದೇವಗನ್ ಮಾತ್ರವಲ್ಲದೇ ಇಮ್ರಾನ್ ಹಶ್ಮಿ, ಇಲಿಯಾನಾ ಡಿಕ್ರೂಜ್ ಕೂಡ ನಟಿಸಿದ್ದಾರೆ.
Comments