ನಟಿ ಶ್ರದ್ಧಾ ಕಪೂರ್ ನ್ಯೂ ಲುಕ್

ನವದೆಹಲಿ: ಬಾಲಿವುಡ್ ನಲ್ಲಿ ರೋಮ್ಯಾಂಟಿಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಇದೀಗ ಶೀರ್ಘದಲ್ಲೇ ಭೂಗತ ಲೋಕದ ಡಾನ್ ದಾವುದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶ್ರದ್ಧಾ ಕಪೂರ್ ಈ ಚಿತ್ರದಲ್ಲಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ. ನಿನ್ನೆ ಹಸೀನಾ ಪಾರ್ಕರ್ ಪಾತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ನಲ್ಲಿ ಶ್ರದ್ಧಾ ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರವು ದಾವುದ್ ತಂಗಿ ಹಸೀನಾ ಪಾರ್ಕರ್ ಜೀವನಾಧಾರಿತ ಕಥೆಯಾಗಿದೆ. ೯೦ರ ದಶಕದಲ್ಲಿ ಮುಂಬೈನಲ್ಲಿ ಭೂಗತ ಜಗತ್ತಿನ ಬಗ್ಗೆ ಚಿತ್ರ ನೆನಪಿಸುತ್ತದೆ. ಶ್ರದ್ಧಾ ಅಣ್ಣ ಸಿದ್ದಾರ್ಥ ಕಪೂರ್ ದಾವುದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ದಾವುದ್ ಸಹೋದರಿಯಾಗಿ ಹಸೀನಾ ಹೇಗೆ ಗುರುತಿಸಿಕೊಂಡಿದ್ದರು ಎಂಬುದರ ಬಗ್ಗೆ ಸಿನಿಮಾದ ಕಥೆ ಹೊಂದಿದೆ. ಹಸೀನಾಳನ್ನು ಮುಂಬೈನ ರಾಣಿ ಅಂತಲೂ ಕರೆಯಲಾಗುತ್ತಿತ್ತು. ಸದ್ಯ ಚಿತ್ರದ ಮೇಲೆ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
Comments