B'Day Spl: ಲೀಸಾ ಹೇಡನ್ ಗೆ ಚಿತ್ರರಂಗಕ್ಕೆ ಪರಿಚಯಿಸಿದ್ದು ಅನಿಲ್ ಕಪೂರ್
ಮುಂಬೈ: ಬಾಲಿವುಡ್ ನಟಿ ಲಿಸಾ ಹೇಡನ್ ತಮ್ಮ ೩೧ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಲೀಸಾ ೧೭ನೇ ವಯಸ್ಸಿನಲ್ಲಿ ಬಾಲಿವುಡ್ ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಕಾಫಿ ಶಾಪ್ ನಲ್ಲಿ ಲಿಸಾರನ್ನು ನೋಡಿದ ನಟ ಅನಿಲ್ ಕಪೂರ್ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯಿಸಿದ್ದರಂತೆ.
೧೭ನೇ ವಯಸ್ಸಿನಲ್ಲಿದ್ದಾಗ ನಟಿ ಲಿಸಾ ಮೇಲೆ ನಟ ವರುಣ್ ಧವನ್ ಗೆ ಲವ್ ಆಗಿತ್ತು. ಈ ಬಗ್ಗೆ ಖುದ್ದು ವರುಣ್ ಧವನ್ ಸಂದರ್ಶನ ವೊಂದರಲ್ಲಿ ಹೇಳಿದ್ದರು. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಲೀಸಾ ಹೇಡನ್ ಮಾಡೆಲಿಂಗ್ ಜಗತ್ತಿನಲ್ಲಿ ಬೇಡಿಕೆ ಪಡೆದುಕೊಂಡಿದ್ದರು. ಈ ಮಧ್ಯೆ ವರುಣ್ ಧವನ್ ಲಿಸಾವರನ್ನು ಪಾರ್ಟಿಯೊಂದರಲ್ಲಿ ನೋಡಿದ್ರಂತೆ. ಲೀಸಾ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ವಯಸ್ಸಿನ ಅಂತರದಿಂದ ಲಿಸಾ ಮದುವೆಯಾಗಲು ನಿರಾಕರಿಸಿದ್ದರು ಎನ್ನಲಾಗುತ್ತದೆ.
ಇದೀಗ ಲಿಸಾ ಹಾಗೂ ವರುಣ್ ಧವನ್ ಉತ್ತಮ ಸ್ನೇಹಿತರಾಗಿದ್ದಾರೆ. ಆದ್ರೆ ಮೊದಲ ಪ್ರೀತಿಯನ್ನು ವರುಣ್ ಧವನ್ ಮರೆಯುವುದಿಲ್ಲ ಎಂದು ಈ ಹಿಂದೆ ಕೇಳಿಕೊಂಡಿದ್ದರು.ಕಳೆದ ವರ್ಷ ಲಿಸಾ ಹೇಡನ್ ತಮ್ಮ ಗೆಳೆಯ ಡಿನೋ ಲಾಲ್ವಾನಿ ಜತೆಗೆ ಮದುವೆಯಾಗಿದ್ದರು.. ಇದೀಗ ಒಂದು ಮಗುವಿನ ಅಮ್ಮನಾಗಿದ್ದಾರೆ ಲಿಸಾ.
Comments