ನಟಿ ಅಮಲಾ ಪೌಲ್ ಎರಡನೇ ಮದುವೆ?

ಚೆನ್ನೈ: ದಕ್ಷಿಣ ಭಾರತ ನಟಿ ಅಮಲಾ ಪೌಲ್ ಎರಡನೇಯ ಮದುವೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಸಹಜ ನಟನೆ ಮೂಲಕ ಸುದೀಪ್ ಜತೆಗೆ ಕನ್ನಡದ ಹೆಬ್ಬುಲಿ ಚಿತ್ರದೊಂದಿಗೆ ಹೆಜ್ಜೆ ಇಟ್ಟ ನಾಯಕಿ ಸೌತ್ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ಅಮಲಾ ಪೌಲ್ ಈ ಬಾರಿಯೂ ಲವ್ ಮ್ಯಾರೇಜ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ನಟಿ ಅಮಲಾ ಪೌಲ್ ತಮಿಳಿನ ನಿರ್ಮಾಪಕ ಎ.ಎಲ್ ವಿಜಯ್ ಜೊತೆಗೆ ಸಪ್ತಪದಿ ತುಳಿದಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರ ದಾಂಪತ್ಯ ಜೀವನ ಮುರಿದು ಬಿತ್ತು. ಪರಸ್ಪರ ಇಬ್ಬರು ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡರು. ಹೀಗಾಗಿ ಅಮಲ್ ಪೌಲ್ ಎರಡನೇಯ ಮದುವೆ ಆಗ್ತಾರಾ? ಎಂಬುದರ ಕುರಿತು ಚರ್ಚೆ ಆಗುತ್ತಿದೆ. ಈ ಕುರಿತು ಖುದ್ದು ಅಮಲ್ ಪೌಲ್ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಸನ್ಯಾಸಿಯಲ್ಲ, ಸನ್ಯಾಸಿಯಾಗಿದ್ದರೆ ಸಿನಿಮಾದಲ್ಲಿರುತ್ತಿರಲಿಲ್ಲ, ಹಿಮಾಲಯಕ್ಕೆ ಹೋಗುತಿದ್ದೆ, ನಾನು ಮತ್ತೆ ಮದುವೆಯಾಗುತ್ತೇನೆ’ ಎಂದು ಹೇಳುವುದರ ಮೂಲಕ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.
Comments