‘ಮುಡ್ ಮುಡ್ ಕೇ ನಾ ದೇಖ್’ ಚಿತ್ರಕ್ಕೆ ತಬು ನಾಯಕಿ

ಮುಂಬೈ: ನಟನೆ ಕೆಲವರಿಗೆ ದೈವದತ್ತ ಪ್ರತಿಭೆ, ಇದಕ್ಕೆ ಉತ್ತಮ ಉದಾಹರಣೆ ಬಾಲಿವುಡ್ ನಟಿ ತಬು. ಯಾವುದೇ ಲಾಬಿ ಮಾಡದೇ ಸಹಜ ನಟನೆಯಿಂದ ನಿರ್ಮಾಪಕರ ಗಮನ ಸೆಳೆದ ಬಹುಭಾಷೆ ತಾರೆ. ಬರೀ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳದೆ ಅಭಿನಯಕ್ಕೆ ಅವಕಾಶವಿರುವಂತಹ ಪಾತ್ರಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡರು. ವಯಸ್ಸು 45 ಆಗಿದ್ದರೂ ಇಂದಿಗೂ ತಬು ನಾಯಕಿಯಾಗಿ ಮಿಂಚುತ್ತಿದ್ದಾರೆ.
ಶ್ರೀರಾಮ್ ರಾಘವನ್ ನಿರ್ದೇಶನದ ಮುಂಬರುವ ಚಿತ್ರಕ್ಕೆ ತಬು ನಾಯಕಿ ಆಗೋದು ಪಕ್ಕಾ ಆಗಿದೆ. ‘ಮುಡ್ ಮುಡ್ ಕೇ ನಾ ದೇಖ್ ‘ಚಿತ್ರದಲ್ಲಿ ನಟಿ ತಬು ಆಯುಷ್ ಮಾನ್ ಖುರಾನಾ ಜತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ, 45 ವಯಸ್ಸಿನ ತಬು 32 ವಯಸ್ಸಿನ ಆಯುಷ್ ಮಾನ್ ಖುರಾನಾ ಜೊತೆಗೆ ಜೋಡಿಯಾಗಲಿದ್ದಾರೆ.
೧೯೫೫ರಲ್ಲಿ ತೆರೆ ಕಂಡ ರಾಜ್ ಕಪೂರ್ ಸೂಪರ್ ಹಿಟ್ ‘ಶ್ರೀ-೪೨೦’ ಚಿತ್ರದ ಹಾಡು ‘ಮುಡ್ ಮುಡ್ ಕೇ ನಾ ದೇಖ್’ ಚಿತ್ರದ ಮೊದಲನೇಯ ಸಾಲನ್ನು ಟೈಟಲ್ ಆಗಿ ಆಯ್ಕೆ ಮಾಡಲಾಗಿದೆ, ಎರಡು ವರ್ಷಗಳ ಬಳಿಕ ಶ್ರೀರಾಮ್ ಈ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.
Comments