‘ರಾಮದೇವ್ ಬಾಬಾ’ ಬಯೋಪಿಕ್ ನಲ್ಲಿ ಅಜಯ್ ದೇವಗನ್

ಮುಂಬೈ: ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಹವಾ ಹೆಚ್ಚುತ್ತಿದೆ. ಬಯೋಪಿಕ್ ಲಿಸ್ಟ್ ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಸೇರ್ಪಡೆಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಬಯೋಪಿಕ್ ಆದ್ಮೇಲೆ ಯೋಗ ಗುರು ಬಾಬಾ ರಾಮದೇವ್ ಜೀವನಾಧಾರಿತ ಚಿತ್ರ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.
ಶೀರ್ಘದಲ್ಲೇ ನಿರ್ಮಾಪಕ ಅಭಿನವ್ ಶುಕ್ಲಾ ಮುಂಬರುವ ಚಿತ್ರದಲ್ಲಿ ನಟ ಅಜಯ್ ದೇವಗನ್ ನಟಿಸಲಿದ್ದು, ಬಾಬಾ ರಾಮದೇವಬಯೋಪಿಕ್ ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಮತ್ತೊಂದು ಮೂಲಗಳ ಪ್ರಕಾರ, ಬಾಬಾ ರಾಮದೇವ್ ಚಿತ್ರವಾಗದೇ ಟೆಲಿವಿಜನ್ ಶೋ ಆಗಲಿದೆ. ಕಿರು ತೆರೆ ಮೇಲೆ ಬಾಬಾ ರಾಮದೇವ ಜೀವನಾಧಾರಿತ ಶೋ ಬರಲಿದೆ ಎನ್ನಲಾಗುತ್ತಿದೆ. ಈ ಶೋ ಹೆಸರು ಸ್ವಾಮಿ 'ಬಾಬಾ ರಾಮದೇವ್ ದಿ ಅನಟೋಲ್ಡ್ ಸ್ಟೋರಿ' ಆಗಲಿದೆ. ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಈ ಶೋ ಬಾಬಾ ರಾಮದೇವ್ ಸ್ನೇಹಿತ ಬಾಲಕೃಷ್ಣ ಜೀವನದ ಕೆಲ ಘಟನೆಗಳ ಕುರಿತು ಪ್ರೇಕ್ಷಕರ ಮುಂದೆ ಬರಲಿದೆಯಂತೆ.
ಬಾಬಾ ರಾಮದೇವ ೨೫ ಡಿಸೆಂಬರ್ ೧೯೬೫ ರಲ್ಲಿ ಹರಿಯಾಣದ ಸಣ್ಣ ಗ್ರಾಮದಲ್ಲಿ ಜನಿಸಿದ್ದರು. ರಾಮದೇವ ಮೂಲ ಹೆಸರು ಸ್ವಾಮಿ ಶಂಕರ್ ದೇವ್ ಆಗಿತ್ತು, ಸನ್ಯಾಸ ಪಡೆದ ನಂತರ ಬಾಬಾ ರಾಮದೇವ್ ಆಗಿ ಬದಲಾವಣೆ ಆಯಿತು.
Comments