ಅಕ್ಷಯ್ ಕುಮಾರ್ ಚಿತ್ರದಲ್ಲಿ ಕತ್ರೀನಾ ಔಟ್.,!
ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೆಲವೇ ಕೆಲ ಜೋಡಿಗಳು ಆನ್ ಸ್ಕ್ರೀನ್ ಕೆಮೆಸ್ಟ್ರಿ ಯಲ್ಲಿ ಖ್ಯಾತಿ ಗಳಿಸಿದ್ದಾರೆ. ಇಂತಹ ಜೋಡಿಗಳಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಜೋಡಿ ಒಂದು. ಮೂಲಗಳ ಪ್ರಕಾರ, ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ 'ನಮಸ್ತೆ ಇಂಗ್ಲೆಂಡ್' ಚಿತ್ರದಲ್ಲಿ ಕತ್ರಿನಾ ಕೈಫ್ ಅವರನ್ನು ಕೈ ಬಿಟ್ಟು, ಪರಿಣಿತಿ ಛೋಪ್ರಾರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ವರದಿ ಪ್ರಕಾರ, ‘ನಮಸ್ತೆ ಇಂಗ್ಲೆಂಡ್’ ಚಿತ್ರ ‘ನಮಸ್ತೆ ಲಂಡನ್ ‘ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಮೊದಲು ಅಕ್ಷಯ್ ಕುಮಾರ್ ಕತ್ರೀನಾ ಜತೆಗೆ ನಟಿಸಿದ್ದರು. ಈ ಹಿಂದೆ ಅಕ್ಷಯ್ ಜತೆಗೆ ಕತ್ರಿನಾ ‘ಹಮ್ ಕೋ ದಿವಾನಾ ಕರ್ ದಿಯೇ’ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಈ ಚಿತ್ರದಲ್ಲಿ ಇಬ್ಬರ ಆನ್ ಸ್ಕ್ರಿನ್ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಲೈಕ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕಂಡಿತ್ತು. ಬಳಿಕ ನಟ ಅಕ್ಷಯ್ ಕುಮಾರ್ ಪ್ರತಿಯೊಂದು ಚಿತ್ರದಲ್ಲೂ ಕತ್ರೀನಾ ಕೈಫ್ ಜತೆಗೆ ನಟಿಸಲು ಶುರು ಮಾಡಿದರು. ಅದರಂತೆ ಅಕ್ಷಯ್ ನಟಿಸಿದ್ದ ಕೆಲ ಚಿತ್ರಗಳು ಕೂಡ ಫ್ಲಾಪ್ ಆಗಲು ಶುರು ಮಾಡಿದ್ದವು. ಇದರಿಂದ ಅಕ್ಷಯ್ ಕುಮಾರ್ ಗೆ ಜತೆ ನಟಿಸಲು ಕತ್ರೀನಾ ಕೈಫ್ ನಿರಾಕರಿಸುತ್ತಿದ್ದರು. ಆದ್ರೆ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಇವತ್ತು ಟಾಪ್ -೧ ಹಿರೋ ಗಳಲ್ಲಿ ಒಬ್ಬರು. ಇಂದು ಕತ್ರಿನಾ ಖೈಫ್ ಜತೆಗೆ ನಟಿಸಲು ಅಕ್ಷಯ್ ನಿರಾಕರಿಸುತ್ತಿದ್ದಾರೆ.
Comments