ಸೋನಾಕ್ಷಿ ಸಿನ್ಹಾ ಅಪ್ಪನ ಪಾತ್ರದಲ್ಲಿ ಸುನೀಲ್ ಶೆಟ್ಟಿ
ಮುಂಬೈ: ಶೀರ್ಘದಲ್ಲೇ ಸೋನಾಕ್ಷಿ ಸಿನ್ಹಾ ಅವರ ಮುಂದಿನ ಸಿನಿಮಾ 'ಸರ್ಕಸ್' ಚಿತ್ರೀಕರಣ ಆರಂಭವಾಗುತ್ತಿದೆ. ವಿಶೇಷವೆಂದರೆ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಈ ಸಿನಿಮಾದಲ್ಲಿ ಸೋನಾಕ್ಷಿ ಅಪ್ಪನಾಗಿ ನಟಿಸಲಿದ್ದಾರಂತೆ. ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಪಕ್ಕಾ ಮ್ಯೂಸಿಕಲ್ ಡ್ರಾಮಾ, 'ಸರ್ಕಸ್' ಸುತ್ತ ನಡೆಯುವ ನೈಜ ಘಟನೆಗಳನ್ನು ಆಧಾರಿತ ಚಿತ್ರ.
ಇದರ ಸುತ್ತ ಸುತ್ತುವ ಘಟನೆಗಳ ಬಗ್ಗೆ ಎಳೆ ಎಳೆಯಾಗಿ ಸಿನಿಮಾದಲ್ಲಿ ಚಿತ್ರಿಸುವ ಪ್ರಯತ್ನವಿದೆ. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ನಿವೃತ್ತ ಸರ್ಕಸ್ ಕಲಾವಿದರಾಗಿ ಮಿಂಚಲಿದ್ದಾರೆ. ಈ ಮೂಲಕ ಅಪ್ಪನಾಗಿ ತನ್ನ ಮಗಳಿಗೆ ಪ್ರೋತ್ಸಾಹ ನೀಡಲಿದ್ದು, ಮಗಳ ಗುರಿ ತಲುಪಲುಸೋನಾಕ್ಷಿಗೆ ಸಹಾಯ ಮಾಡಲಿದ್ದಾರಂತೆ.
ಬಾಸ್ಕೋ ಮಾರ್ಟಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಇವರ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾವಂತೆ. ಇನ್ನು ಸೋನಾಕ್ಷಿ ಸಿನ್ಹಾಗೆ ನಟ ಅಜಯ್ ದೇವಗನ್ ಬೈಕ್ ಕಲಿಸಿಕೊಟ್ಟಿದ್ದಾರಂತೆ. ಈ ಹಿಂದೆ ಪರಿಣಿತಿ ಛೋಪ್ರಾ ಹಾಗೂ ಕಂಗನಾ 'ಸರ್ಕಸ್' ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಸೋನಾಕ್ಷಿ ಫೈನಲ್ ಆಗಿರುವುದು ಖಚಿತವಾಗಿದೆ.
Comments