ಇಂದು ಚಿತ್ರ ವೀಕ್ಷಿಸಲಿರುವ ನಟ ಶಿವರಾಜಕುಮಾರ್
ಸ್ಯಾಂಡಲ್ ವುಡ್ ನಟ ಶಿವರಾಜಕುಮಾರ್ ಇಂದು ತಾವು ಅಭಿನಯಿಸಿದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರ ವೀಕ್ಷಿಸಲಿದ್ದಾರೆ. ಸಿನಿಮಾವನ್ನು ಮೆಚ್ಚಿದ ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಲು ಶಿವರಾಜಕುಮಾರ್ ನಿರ್ಧರಿಸಿದ್ದಾರೆ.
ಇಂದು ಸಿನಿಮಾ ವೀಕ್ಷಿಸಿದ ಬಳಿಕ ಸ್ಕೂಲ್ ಬ್ಯಾಗ್, ನೋಟ್ ಬುಕ್ ಅನ್ನು ನಟ ಶಿವರಾಜಕುಮಾರ್ ವಿತರಿಸಲಿದ್ದು, ಈ ಮೂಲಕ ಸರ್ಕಾರಿ ಶಾಲೆ ಹಾಗೂ ರೈತರ ಮಕ್ಕಳನ್ನು ಪ್ರೋತ್ಸಾಹಿಸಲಿದ್ದಾರೆ. ಯೋಗಿ ಜಿ ರಾಜ್ ನಿರ್ದೇಶನದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರವನ್ನು ಜಯಣ್ಣ ನಿರ್ದೇಶಿಸಿದ್ದು, ರೈತರ ಸಮಸ್ಯೆಗಳ ಕಥೆ ಆಧಾರಿತ ಸಿನಿಮಾ ಈಗ 27ನೇ ದಿನಕ್ಕೆ ಕಾಲಿಟ್ಟಿದೆ.
ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಅಭಿನಯದ ೧೧೪ನೇ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಜಯಣ್ಣಾ ಮತ್ತು ಭೋಗೇಂದ್ರ ನಿರ್ಮಿಸಿದ್ದು, ವಿದ್ಯಾ ಪ್ರದೀಪ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶಿವರಾಮ್ , ಶ್ರೀನಾಥ್, ಸದಾಶಿವ ಹಾಗೂ ಮೈಕೋ ನಾಗರಾಜ್ ತಾರಾ ಬಳಗವೇ ಇದೆ.
Comments