ಅನುಷ್ಕಾ ಅಭಿನಯದ ‘ಪರಿ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯದ ‘ಪರಿ ‘ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದೆ. ೨೯ ವರ್ಷದ ನಟಿ ಅನುಷ್ಕಾ ಅವರ ಕ್ಲೀನ್ ಸ್ಲೇಟ್ ಫಿಲ್ಮಂ ಬ್ಯಾನರ್ ಅಡಿಯಲ್ಲಿ ಪರಿ ಚಿತ್ರ ತಯಾರಾಗುತ್ತಿದ್ದು, ಚಿತ್ರದ ಮೊದಲ ಲುಕ್ ನಲ್ಲಿ ಗಂಭೀರವಾಗಿ ಕಾಡುವ ನೋಟದೊಂದಿಗೆ ಅನುಷ್ಕಾ ಶರ್ಮಾಮಿಂಚಿದ್ದಾರೆ.
ನಟಿ ಅನುಷ್ಕಾ ಶರ್ಮಾ ಲುಕ್ ನೋಡಿದ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಚಿತ್ರವನ್ನು ೨೯ ವರ್ಷದ ಡೆಬ್ಯುಟಾಂಟೆ ಪ್ರಾಸಿಟ್ ರಾಯ್ ಅವರು ನಿರ್ದೇಶಿಸುತ್ತಿದ್ದು, ನಾಯಕನಾಗಿ ಬಂಗಾಳಿ ಮೂಲದ ನಟ ಪರಮ್ರತಾ ಚಟರ್ಜಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಅನುಷ್ಕಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.
Comments