ಡೈಸಿ ಶಾ, ಸಲ್ಮಾನ್ ಖಾನ್ ಮತ್ತೊಮ್ಮೆ ಸ್ಕ್ರೀನ್ ಶೇರ್

ಮುಂಬೈ: ರೆಮೊ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಹೊಸ ನಾಯಕಿ ಜತೆ ನಟಿಸುತ್ತಿಲ್ಲ. ಅವರ ಹಳೇ ಹಿರೋಯಿನ್ ಡೈಸಿ ಶಾ ಜತೆಗೆ ಮತ್ತೊಮ್ಮೆ ಜೋಡಿಯಾಗಲಿದ್ದಾರೆ.
'ಜೈ ಹೋ' ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ಸಲ್ಮಾನ್ ಖಾನ್ ಹಾಗೂ ಡೈಸಿ ಶಾ ಮತ್ತೊಮ್ಮೆ ಬಿಗ್ ಸ್ಕ್ರೀನ್ ಶೇರ್ ಮಾಡಲಿದ್ದು. ವರದಿ ಪ್ರಕಾರ, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ಇಬ್ಬರು ನಟಿಯರು ನಟಿಸಲಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರಕ್ಕಾಗಿ ಫೈನಲ್ ಆಗಿದ್ದಾರೆ. ಈ ಚಿತ್ರದಲ್ಲಿ ‘ಜಯ್ ಹೋ’ ಚಿತ್ರದಲ್ಲಿ ಸಲ್ಲುಗೆ ಕೋ ಸ್ಟಾರ್ ಆಗಿದ್ದ ನಟಿ ಡೈಸಿ ಶಾ ಕೂಡ ಈ ಚಿತ್ರದಲ್ಲಿಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಡೈಸಿ ಶಾ ಸಲ್ಮಾನ್ ಖಾನ್ ಗೆ ಜತೆಯಾಗಿ ನಟಿಸುತ್ತಿರುವ ಎರಡನೆಯ ಚಿತ್ರ ಇದಾಗಲಿದೆ. ಇನ್ನು ವಿಶೇಷವೆಂದರೆ ಸಲ್ಮಾನ್ ಖಾನ್ ಈ ಚಿತ್ರದಲ್ಲಿ ೧೩ ವರ್ಷದ ಮಗುವಿಗೆ ತಂದೆ ಪಾತ್ರದಲ್ಲಿ ಮಿಂಚಲಿದ್ದು, ಸಲ್ಮಾನ್ ಖಾನ್ ಸದ್ಯ ‘ಟೈಗರ್ ಚಿಂದಾ ಹೇ’ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಮುಕ್ತಾಯವಾದ ಮೇಲೆ ರೆಮೊ ಅವರ ಚಿತ್ರದ ಶೂಟಿಂಗ್ ಶುರು ಮಾಡಲಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ಮತ್ತೊಂದು ಚಿತ್ರ ‘ಟ್ಯೂಬ್ ಲೈಟ್’ ಇದೇ ತಿಂಗಳ ೨೩ಕ್ಕೆ ರಿಲೀಸ್ ಆಗಲಿದೆ.
Comments