ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಪಾಕ್ ನ ಕ್ರೀಡಾ ಪತ್ರಕರ್ತೆ ಕಾರಣ!?

ನವದೆಹಲಿ, ಐಸಿಸ್ ಚಾಂಪಿಯನ್ಸ್ ಟ್ರೋಫಿ ೨೦೧೭ ಏಕದಿನ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಎಬಿಡಿ ವಿಲಿಯರ್ಸ್ ಶೂನ್ಯ ಪ್ರದರ್ಶನಕ್ಕೆ ಪಾಕ್ ಪತ್ರಕರ್ತೆ ಕಾರಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ವಿಲಿಯರ್ಸ್ ಪಾಕಿಸ್ತಾನ ವಿರುದ್ಧ ಗೋಲ್ಡನ್ ಡಕ್ ಗೆ ಬಲಿಯಾದರೆ, ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಶೂನ್ಯದ ಸುಳಿಗೆ ಸಿಲುಕಿದ್ದರು.
ಕಾಕತಾಳೀಯ ಎಂದರೆ ಇವರಿಬ್ಬರು ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡವನ್ನು ಪ್ರತಿನಿಧಿಸುತ್ತಾರೆ. ಪಂದ್ಯದ ಮೊದಲು ವಿಲಿಯರ್ಸ್ ಹಾಗೂ ಕೊಹ್ಲಿ ಪಾಕ್ ನ ಕ್ರೀಡಾ ಪತ್ರಕರ್ತೆಯಾದ ಜೈನಾಬ್ ಜೆತೆಗೆ ಸೆಲ್ಫಿಯನ್ನು ಚಿತ್ರಿಸಿಕೊಂಡಿದ್ದರು. ಸೆಲ್ಫಿ ತೆಗೆದಿದ್ದೆ ತಡ ಗ್ರಹಚಾರ ವೆಂಬತೆ ಇವರಿಬ್ಬರು ಶೂನ್ಯಕ್ಕೆ ಔಟಾದರು.
Comments