'ಟಾಯ್ಲೆಟ್ ಏಕ್ ಪ್ರೇಮ್ ಕಥಾ'ಗೆ ನಿಹಲಾನಿ ಮೆಚ್ಚುಗೆ
ಮುಂಬೈ: ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಧ್ಯಕ್ಷ ಪಹಲಾಜ್ ನಿಹಲಾನಿ 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಚಿತ್ರ ಮುಕ್ತವಾಗಿರಬೇಕು ಎಂದರು.
ಗುರುವಾರ ರಾತ್ರಿ ಚಿತ್ರದ ಟ್ರೇಲರ್ ವೀಕ್ಷಿಸಿದ ಅವರು, ಚಿತ್ರದ ಟ್ರೈಲರ್ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ ಫೊಟೋ ಜತೆಗೆ ಕ್ಯಾಪ್ಶನ್ ಕೂಡ ಹಾಕಿಕೊಂಡಿದ್ದು, ಅಕ್ಷಯ್ ಕುಮಾರ್ ಅಭಿನಯದ ಚಿತ್ರ ನೈಜ ಘಟನೆಗಳ ಆಧಾರಿತ ಚಿತ್ರ, ಈ ಚಿತ್ರ ಸ್ವಚ್ಛ ಭಾರತದ ಕುರಿತು ಅರಿವು ಮೂಡಿಸುತ್ತದೆ, ನೀವೂ ಆಯ್ಕೆ ಮಾಡುವ ಎಲ್ಲಾ ಚಿತ್ರಗಳು ಅತ್ಯುತ್ತಮವಾಗಿರುತ್ತವೆ, ಸಮಾಜದಲ್ಲಿ ಸಕಾರಾತ್ಮಕವಾಗಿ ಬದಲಾವಣೆ ತರಲು ಸಾಧ್ಯವಾಗುತ್ತವೆ ಎಂದು ಅಕ್ಷಯ್ ಕುಮಾರ್ ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಟಾಯ್ಲೆಟ್’ ಏಕ್ ಪ್ರೇಮ್ ಕಥಾ’ ಚಿತ್ರ ಶ್ರೀ ನಾರಾಯಣ ಸಿಂಗ್ ನಿರ್ದೇಶಿಸಿದ್ದು, ಪ್ರೇಮ ಕಥೆಯೊಂದಿಗೆ ಸ್ವಚ್ಛ ಭಾರತ ಅಭಿಯಾನದ ವೈಫಲ್ಯಗಳನ್ನು ಬಿಂಬಿಸುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಅಕ್ಷಯ್ ಕುಮಾರ್ ಜೋಡಿಯಾಗಿ ಭೂಮಿ ಪಡ್ನೇಕರ್ ನಟಿಸಿದ್ದು, ಅನುಪಮ್ ಖೇರ್, ಸನ್ಹಾ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Comments