'ಮುನ್ನಾ ಮೈಕಲ್' ಚಿತ್ರದ ಸಾಂಗ್ ರಿಲೀಸ್

ಮುಂಬೈ : ಟೈಗರ್ ಶ್ರಾಫ್ ಅಭಿನಯದ ‘ಮುನ್ನಾ ಮೈಕಲ್’ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಚಿತ್ರದ ಮೈ ಹೂಂ ಹಾಡಿನ ಮೂಲಕ ಟೈಗರ್ ತಮ್ಮ ನೃತ್ಯದ ಪ್ರತಿಭೆಯನ್ನು ಹೊರಹಾಕಿದ್ದಾರೆ.
ಈ ಸಾಂಗ್ ಗಾಗಿ ಟೈಗರ್ ಶ್ರಾಫ್ ಹೆಚ್ಚು ಶ್ರಮ ಪಟ್ಟಿದ್ದಾರಂತೆ಼. ಹಾಡಿನಲ್ಲಿ ಅಂತರಾಷ್ಟ್ರೀಯ ನೃತ್ಯ ಶೈಲಿಯು ಸಂಯೋಜನೆಯನ್ನು ಕಾಣಬಹುದು. ಚಿತ್ರದ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದ್ದು ಚಿತ್ರ ರಸಿಕರನ್ನು ಸೆಳೆಯುತ್ತವೆ.
‘ಮೈಕಲ್ ಜಾಕ್ಸನ್’ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ, ನಿಧಿ ಅಗರ್ವಾಲ್ ಇದ್ದಾರೆ. ಚಿತ್ರವನ್ನು ಸಬೀರ್ ಖಾನ್ ನಿರ್ದೇಶಿಸಿದ್ದು, ಇದೊಂದು ನೃತ್ಯಾಧರಿತ ಸಿನಿಮಾವಂತೆ. ಇದರಲ್ಲಿ ಟೈಗರ್ ಶ್ರಾಫ್ ಬೀದಿ ನೃತ್ಯಗಾರನಾಗಿದ್ದು, ಮೈಕಲ್ ಜಾಕ್ಸನ್ ದೊಡ್ಡ ಅಭಿಮಾನಿಯಾಗಿರುತ್ತಾರೆ.
ಈ ಸಿನಿಮಾದಲ್ಲಿ ನಟ ಟೈಗರ್ ಶ್ರಾಫ್ ಹಣಕ್ಕಾಗಿ ‘ಮೈಕಲ್ ಜಾಕ್ಸನ್’ ನ ಹಾಡುಗಳನ್ನು ಹಾಡಿಕೊಂಡು ಬೀದಿ ಬೀದಿ ನೃತ್ಯ ಮಾಡುತ್ತಿರುತ್ತಾರೆ. ವಿಶೇಷವೆಂದರೆ ಈ ಚಿತ್ರಕ್ಕಾಗಿ ಟೈಗರ್ ಶ್ರಾಫ್ ನೃತ್ಯ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.
Comments