ಪ್ರಿಯಾಂಕಾ.. ದೀಪಿಕಾ ಪಡುಕೋಣೆ ಅಲ್ಲ.. ಇವರು ಅತಿ ಶ್ರೀಮಂತ ನಟಿ?
ಮುಂಬೈ: ಬಾಲಿವುಡ್ ಟಾಪ್ ನಟಿಯರಲ್ಲಿ ಸದ್ಯಕ್ಕೆ ಪ್ರಿಯಾಂಕಾ ಛೋಪ್ರಾ, ದೀಪಿಕಾ ಹಾಗೂ ಕಂಗನಾ ಹೆಸರು ಕೇಳಿ ಬರುತ್ತದೆ. ಇವರನ್ನು ಹೆಚ್ಚು ಶ್ರೀಮಂತ ನಟಿಯರೆಂದು ಹೇಳಲಾಗುತ್ತದೆ. ಆದರೆ ನಿಮಗೆ ಗೊತ್ತಾ , ಎಲ್ಲಾ ನಟಿಯರಿಗಿಂತಲೂ ಅಮಿಷಾ ಪಟೇಲ್ ಶ್ರೀಮಂತ ನಟಿಯಂತೆ. ಬಾಲಿವುಡ್ ಟಾಪ್ ನಟಿಯರಾದ ಪ್ರಿಯಾಂಕಾ, ದೀಪಿಕಾ ಪಡುಕೋಣೆ ಹಾಗೂ ಕಂಗನಾ ಸೇರಿದಂತೆ ಹಲವು ನಟಿಯರನ್ನು ಹಿಂದಿಕ್ಕಿದ್ದಾರೆ ಇವರು.
ಇವತ್ತು ಬಾಲಿವುಡ್ ನಟಿ ಅಮಿಷಾ ಪಟೇಲ್ ಹುಟ್ಟು ಹಬ್ಬದ ದಿನ. ೪೧ ವಸಂತಕ್ಕೆ ಕಾಲಿಡುತ್ತಿರುವ ಅಮಿಷಾ ಪಟೇಲ್, ೯ ಜೂನ್ ೧೯೭೬ರಲ್ಲಿ ಮುಂಬೈನಲ್ಲಿ ಜನ್ಮಿಸಿದರು. ಬಾಲಿವುಡ್ ನಲ್ಲಿ ಅಮಿಷಾ ಪಟೇಲ್ ಹೆಚ್ಚು ಯಶಸ್ಸು ಕಂಡಿಲ್ಲವಾದರೂ ಹಿಂದಿ ಚಿತ್ರರಂಗದ ಟಾಪ್ ನಟಿಯರ ಪೈಕಿ ಇವರೇ ಅತಿ ಹೆಚ್ಚು ಶೀಮಂತ ನಟಿಯಾಗಿದ್ದಾರೆ.
ಐಶ್ವರ್ಯ ರೈ: ಬಾಲಿವುಡ್ ವಿಶ್ವವಿಖ್ಯಾತ ನಟಿ ಅಂತಲೇ ಹೇಳಲ್ಪಡುವ ಐಶ್ವರ್ಯ ರೈ ಅವರ ಗಳಿಕೆ ೩೫ ಮಿಲಿಯನ್ ಡಾಲರ್ಆಗಿದೆ. ಬಾಲಿವುಡ್ ನಟಿಯರ ಲಿಸ್ಟ್ ನಲ್ಲಿ ಐಶ್ವರ್ಯ ರೈ ಮುಂದೆ ಇದ್ದಾರೆ.
ನಂತರ ಬರುವ ನಟಿ ಅಮಿಷಾ ಪಟೇಲ್, ಬಾಲಿವುಡ್ ಹಾಟ್ ನಟಿಯರಾದ ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆ ಗಿಂತಲೂ ಅಮಿಷಾ ಪಟೇಲ್ ೩೦ ಮಿಲಿಯನ್ ಡಾಲರ್ ಸಂಪತ್ತು ಗಳಿಕೆ ಹೊಂದಿದ್ದಾರೆ. ‘ಕಹೋ ನಾ ಪ್ಯಾರೇ ಹೇ’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಅಮಿಷಾ ಪಟೇಲ್ ಸದ್ಯ ೩೦ ಮಿಲಿಯನ್ ಒಡತಿಯಾಗಿದ್ದಾರೆ.
ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಅವರ ಸದ್ಯ ೨೦ ಮಿಲಿಯನ್ ಸಂಪತ್ತಿನ ಒಡತಿಯಾದ್ರೆ, ಪ್ರಿಯಾಂಕಾ ಛೋಪ್ರಾ ೧೦.೫ ಮಿಲಿಯನ್ ಡಾಲರ್ ಹೊಂದಿದ್ದಾರೆ. ಅದರಂತೆ ಬಾಲಿವುಡ್ ನ ಬ್ಯುಟಿ ಕ್ವೀನ್ ಕಂಗನಾ ೧೦.೮ ಮಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರಂತೆ.
Comments