ಅಪ್ಪನಾಗಿರುವ ಸಂತಸದಲ್ಲಿ ಕ್ರಿಕೆಟ್ ಆಟಗಾರ ಜಡೇಜಾ

ಮುಂಬೈ: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅಪ್ಪ ಆಗಿದ್ದಾರೆ. ಇಂದು ಬೆಳಿಗ್ಗೆ ಜಡೇಜಾ ಪತ್ನಿ ರಿವಾ ಹೆಣ್ಣು ಮಗುವಿದೆ ಜನ್ಮ ನೀಡಿರುವುದು ಮೂಲಗಳಿಂದ ತಿಳಿದು ಬಂದಿದೆ. ಭಾರತ ಹಾಗೂ ಶ್ರೀಲಂಕಾ ಪಂದ್ಯಕ್ಕೂ ಮುನ್ನವೇ ರವೀಂದ್ರ ಜಡೇಜಾ ಹೆಣ್ಣು ಮಗುವಿಗೆ ಅಪ್ಪನಾಗಿರುವ ಸಂತಸದಲ್ಲಿದ್ದಾರೆ.
ಜಡೇಜಾ ಸೋಲಂಕಿ ೨೦೧೬ರ ಏಪ್ರಿಲ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೂರು ತಿಂಗಳ ಹಿಂದೆ ಮಾರ್ಚ್ ನಲ್ಲಿ ನಡೆದಿದ್ದ ಅಪಘಾತದಲ್ಲಿ ಜಡೇಜಾ ಪ್ರಾಣಾಪಾಯದಿಂದ ಪಾರಾಗಿದ್ದರು.
ಸದ್ಯ ರವೀಂದ್ರ ಜಡೇಜಾ ಚಾಂಪಿಯನ್ಸ್ ಟ್ರೋಫಿಗಾಗಿ ಲಂಡನ್ ನಲ್ಲಿದ್ದಾರೆ. ಕುಟುಂಬದವರಿಂದ ವಿಷಯ ತಿಳಿಯುತ್ತಿದ್ದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರ ಜತೆಗೆ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಮಗುವನ್ನು ಜಡೇಜಾ ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ್ದಾರಂತೆ.
Comments