ಬ್ಯಾಡ್ಮಿಂಟನ್ ಟ್ರೈನಿಂಗ್ ನಲ್ಲಿ ನಟಿ ಶ್ರದ್ಧಾ ಕಪೂರ್

ಮುಂಬೈ: ಬ್ಯಾ಼ಡ್ಮಿಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್ ನಲ್ಲಿ ಶ್ರದ್ಧಾ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತು. ಚಿತ್ರದ ಪಾತ್ರಕ್ಕಾಗಿ ಶ್ರದ್ಧಾ ಕಪೂರ್ ತುಂಬಾ ವರ್ಕೌಟ್ ಮಾಡುತ್ತಿದ್ದಾರೆ . ಇದೀಗ ನಟಿ ಶ್ರದ್ಧಾ ಬ್ಯಾಡ್ಮಿಂಟನ್ ತರಬೇತಿ ಪಡೆಯಲು ಮುಂದಾಗಿದ್ದಾರೆ.
ರಿಯಲ್ ಲೈಫ್ ನಲ್ಲಿ ಶ್ರದ್ಧಾ ಒಬ್ಬ ಕ್ರೀಡಾ ಪ್ರೇಮಿ. ಫುಟ್ಬಾಲ್, ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಶಾಲಾ ದಿನಗಳಲ್ಲಿ ಹೆಚ್ಚು ಆಸಕ್ತಿಯಿಂದ ಆಡುತ್ತಿದ್ದ ಶ್ರದ್ಧಾ, ರಿಲ್ ಲೈಫ್ ನಲ್ಲೂ ಈ ಪಾತ್ರ ಸಿಕ್ಕಿರೋದಕ್ಕೆ ಖುಷಿಯಾಗಿದ್ದಾರಂತೆ, ಸೈನಾ ನೆಹ್ವಾಲ್ ಬಯೋಪಿಕ್ ನಲ್ಲಿ ನಟಿಸುವುದು ನನ್ನ ಅದೃಷ್ಟಾ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಅಭಿಮಾನಿಯಾಗಿದ್ದಾರಂತೆ ಶ್ರದ್ಧಾ ಕಪೂರ್, ಈ ಚಿತ್ರಕ್ಕಾಗಿ ಪ್ರಕಾಶ್ ಪಡುಕೋಣೆ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೈನಾ ನೆಹ್ವಾಲ್ ಬಯೋಪಿಕ್ ಚಿತ್ರವನ್ನು ಭೂಷಣ ಕುಮಾರ್ ನಿರ್ಮಾಣ ಮಾಡಿದ್ದು, ಬಿ.ಅಮೋಲ್ ಗುಪ್ತೆ ಅವರ ನಿರ್ದೇಶನವಿದೆ.
Comments