ಬಿಗ್ ಬಾಸ್ -11 ನಿರೂಪಣೆ ಹೊಣೆ ಹೊತ್ತ ಸಲ್ಲು

ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಶೀಘ್ರದಲ್ಲಿಯೇ ಸಲ್ಮಾನ್ ಖಾನ್ ಕಿರು ತೆರೆ ಮೇಲೆ ಮತ್ತೆ ಬರಲಿದ್ದಾರೆ. ಬಿಗ್ ಬಾಸ್ ಸೀಸನ್ 11 ನಿರೂಪಣೆಯ ಹೊಣೆಯನ್ನು ದಬಾಂಗ್ ಭಾಯ್ ಹೊರಲಿದ್ದಾರೆ. ಇದನ್ನು ಕಲರ್ಸ್ ಚಾನೆಲ್ ಸಿಇಒ ರಾಜ್ ನಾಯಕ್ ದೃಢಪಡಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಟ್ವಿಟ್ ಮಾಡಿರುವ ರಾಜ್ ನಾಯಕ್, ಮುಂದಿನ ಬಿಗ್ ಬಾಸ್ ಶೋವನ್ನು ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಬ್ಯುಸಿ ಇರುವ ಕಾರಣ ಮುಂದಿನ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ವದಂತಿಗಳು ಕೇಳಿ ಬಂದಿದ್ದವು. ರಾಜ್ ನಾಯಕ್ ಟ್ವಿಟರ್ ಇದೆಲ್ಲದಕ್ಕೂ ಫುಲ್ ಸ್ಟಾಪ್ ಹಾಕಿದೆ.
ಹಿಂದಿನ ಆವೃತ್ತಿಯಂತೆ ಬಿಗ್ ಬಾಸ್ ಸೀಸನ್ 11ರಲ್ಲಿಯೂ ಸೆಲೆಬ್ರಿಟಿಗಳ ಜೊತೆ ಶ್ರೀಸಾಮಾನ್ಯರು ಪಾಲ್ಗೊಳ್ಳಲಿದ್ದಾರೆ. ಕಲರ್ ಆ್ಯಪ್ ನಲ್ಲಿ ಶ್ರೀಸಾಮಾನ್ಯರಿಗೆ ತಮ್ಮ ವಿಡಿಯೋ ಅಪ್ಲೋಡ್ ಮಾಡಿ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲು ಅಪ್ಲಿಕೇಷನ್ ಹಾಕುವ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ – ಅಕ್ಟೋಬರ್ ನಲ್ಲಿ ಬಿಗ್ ಬಾಸ್ 11 ಸೀಸನ್ ಶುರುವಾಗಲಿದೆ.
Comments