'ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್' ಫಸ್ಟ್ ಲುಕ್ ರಿಲೀಸ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರ ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ನಟ ಅನುಪಮ್ ಖೇರ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೊದಲನೇಯ ಲುಕ್ ಬಿಡುಗಡೆಗೊಂಡಿದೆ.
ಈ ಬಗ್ಗೆ ವಾಣಿಜ್ಯ ವಿಶ್ಲೇಷಕ ತರುಣ್ ಆದರ್ಶ ಟ್ವಿಟ್ ಮಾಡಿದ್ದು, ಸಿನಿಮಾದ ಫಸ್ಟ್ ಲುಕ್ ರಿಲೀಸ್ ಬಗ್ಗೆ ಹಂಚಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ಚಿತ್ರ ಡಿಸೆಂಬರ್ ೨೦೧೮ಕ್ಕೆ ತೆರೆಗೆ ಬರಲಿದೆ. ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.
ಮಾಜಿ ಪಿಎಂ ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ್ ಬರು ಬರೆದ ಪುಸ್ತಕ ಸಿನಿಮಾ ಆಗಿ ಹೊರಬರುತ್ತಿದೆ.
Comments