ಚಾಂಪಿಯನ್ಸ್ ಟ್ರೋಫಿ.. ಸೆಮಿಫೈನಲ್ ಗೆ ಇಂಗ್ಲೆಂಡ್

ಲಂಡನ್: ಆಲ್ ರೌಂಡರ್ ಆಟದ ಪ್ರದರ್ಶನದಿಂದ ಆತಿಧೇಯ ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ನ್ಯೂಜಿಲೆಂಡ್ ವಿರುದ್ಧ ೮೭ರನ್ ಜಯ ಗಳಿಸುವ ಮೂಲಕ ಇಂಗ್ಲೆಂಡ್ ಸೆಮಿಸ್ ಪ್ರವೇಶಿಸಿದೆ. ಇಲ್ಲಿನ ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ೨ನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ೮೭ ರನ್ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಗೆಲುವಿಗೆ ೩೧೧ ರನ್ ಗುರಿ ನೀಡಿತ್ತು.ಬ್ಯಾಟ್ಸಮನ್ ಗಳ ಜವಾಬ್ದಾರಿಯುತ ಆಟದಿಂದ ೪೯.೩ ಓವರ್ ಗಳಲ್ಲಿ ೩೧೦ ರನ್ ಪೇರಿಸಿ ಆಲೌಟ್ ಆಯಿತು.
ಅಲೆಕ್ಸ್ ಹೇಲ್ಸ್ ೫೬, ಜೊರೂಟ್ ೬೪, ಜಾಸ್ ಬಟ್ಲರ್ ೬೧, ಬೆನ್ ಸ್ಟೋಕ್ಸ್ ೪೮ ಆಸರೆಯಿಂದ ಇಂಗ್ಲೆಂಡ್ ತಂಡ ೩೧೦ ರನ್ ಗಳನ್ನು ಬಾರಿಸಿತು. ನ್ಯೂಜಿಲೆಂಡ್ ತಂಡದ ಪರವಾಗಿ ಕೋರೆ ಆ್ಯಂಡರ್ಸನ್ ಹಾಗೂ ಆ್ಯಡಮ್ ಮಿಲ್ನೆ ತಲಾ ೩ ವಿಕೆಟ್ ಕಬಳಿಸಿದರು. ಟೀಮ್ ಸೌಥಿ ೨ ವಿಕೆಟ್ ಪಡೆದರು. ಉಳಿದಂತೆ ಟ್ರೆಂಟ್ ಬೌಲ್ಟ್ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.
Comments