B’ Day Spl.. ಚಿತ್ರದ ಆಫರ್ ರಿಜೆಕ್ಟ್ ಮಾಡಿದ್ದ ನಟಿ ಅಮೃತಾ ರಾವ್
ಮುಂಬೈ: ಬಾಲಿವುಡ್ ನ ಒಂದು ಕಾಲದಲ್ಲಿ ಸಕ್ಸಸ್ ಕಂಡ ನಟಿ ಅಮೃತಾ ರಾವ್, 2013ರಲ್ಲಿ ತೆರೆಕಂಡ 'ಸತ್ಯಾಗ್ರಹ' ಚಿತ್ರ ಹಾಗೂ ಶಾಹಿದ್ ಕಪೂರ್ ಜತೆಗೆ ಅಭಿನಯಿಸಿದ್ದ 'ವಿವಾಹ' ಚಿತ್ರದ ಮೂಲಕ ಅಮೃತಾ ಖ್ಯಾತಿ ಗಳಿಸಿದ್ದರು. ಅವರು ನಟಿಸಿದ್ದ ಚಿತ್ರ 'ಮೇರಿ ಅವಾಜ್ ಹೇ ಪೇಹಚಾನ್ ಹೇ'ನಲ್ಲಿ ಅಮೃತಾ ತನ್ನ ಪ್ರತಿಭೆ ಏನು ಅಂತ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದ್ದರು.
ಬಾಲಿವುಡ್ ನಟಿ ಅಮೃತಾ ರಾವ್ ಅವರ ಅರ್ತಡೇ ಸಂಭ್ರಮ. ೩೫ನೇ ವಸಂತಕ್ಕೆ ಅಮೃತಾ ರಾವ್ ಕಾಲಿಡುತ್ತಿದ್ದಾರೆ. ತಮ್ಮ ಕೆರಿಯರ್ ನಲ್ಲಿ ಯಾವುದೇ ವಿವಾದದಲ್ಲಿ ಅಮೃತಾ ರಾವ್ ಸಿಲುಕಿದವರಲ್ಲ, ಒಂದು ಕಾಲದಲ್ಲಿ ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಸುತ್ತಾಡುತ್ತಿದ್ದರು. ಕರೀನಾ ಶಾಹಿದ್ ಕಪೂರ್ ಮಧ್ಯೆ ಬ್ರೇಕ್ ಅಪ್ ಆದ ಬಳಿಕ ಶಾಹಿದ್ ಜತೆಗೆ ಅಮೃತಾ ರಾವ್ ಹೆಸರು ಕೇಳಿ ಬಂದಿತ್ತು.
ಮೂಲಗಳ ಪ್ರಕಾರ, ‘ವಿವಾಹ’ ಚಿತ್ರೀಕರಣದ ಸಂದರ್ಭದಲ್ಲಿ ಶಾಹಿದ್ ಕಪೂರ್ ಹಾಗೂ ಅಮೃತಾ ರಾವ್ ಮಧ್ಯೆ ಫ್ರೆಡ್ ಶಿಪ್ ಬೆಳೆಯಲಾರಂಭಿಸಿತು. ಇದೇ ವೇಳೆ ಕರೀನಾ ಕಪೂರ್ ಹಾಗೂ ಶಾಹಿದ್ ಮಧ್ಯೆ ಜಗಳ ಶುರುವಾಗಿತ್ತು. ೨೦೦೬ರಲ್ಲಿ ತೆರೆ ಕಂಡ ವಿವಾಹ ಚಿತ್ರದ ಬಳಿಕ ಶಾಹಿದ್ ಹಾಗೂ ಅಮೃತಾ ಮಧ್ಯದ ಸಂಬಂಧದ ಬಗ್ಗೆ ಚರ್ಚೆಗಳಾಗುತ್ತಿದ್ದವು.
ನಬ್ಬಿಬ್ಬರ ಮಧ್ಯೆ ಉತ್ತಮ ಫ್ರೆಂಡ್ ಶಿಪ್ ಇದೆ, ಶಾಹಿದ್ ಕಪೂರ್ ನನ್ನ ಉತ್ತಮ ಕೊ-ಸ್ಚಾರ್ ಆಗಿದ್ದು, ನಮ್ಮಿಬ್ಬರ ಮಧ್ಯೆ ಕೆಮೆಸ್ಟ್ರಿ ಚೆನ್ನಾಗಿದೆ ಅಂತ ಮಾಧ್ಯಮಗಳಿಗೆ ಅಮೃತಾ ಸ್ಪಷ್ಟನೆ ನೀಡಿದ್ದರು.
ಬಳಿಕ ರಣಬೀರ್ ಕಪೂರ್ ಚಿತ್ರದಲ್ಲಿ ನಟಿಸಲು ಅಮೃತಾ ಅಲ್ಲಗಳೆದಿದ್ದರು ಎಂಬ ಹೇಳಲಾಗ್ತಿತ್ತು. ರಣಬೀರ್ ಕಪೂರ್ ಜೆತಗಿನ ಕಿಸ್ಸಿಂಗ್ ಪಾತ್ರಕ್ಕೆ ಅಮೃತಾ ನಿರಾಕರಿಸಿದ್ದರು ಎಂಬ ಮಾತಿದೆ. ೨೦೦೭ರಲ್ಲಿ ಯಶ್ ರಾಜ್ ಚಿತ್ರಕ್ಕೆ ಅಮೃತಾ ರಾವ್ ಗೆ ಆಫರ್ ನೀಡಲಾಗಿತ್ತು. ಈ ಚಿತ್ರದಲ್ಲಿ ರಣಬೀರ್ ಗೆ ಕಿಸ್ ಮಾಡುವ ಪಾತ್ರವೊಂದಿತ್ತು. ಆದರೆ ರಣಬೀರ್ ಜತೆಗೆ ಅಮೃತಾ ಈ ಪಾತ್ರಕ್ಕೆನಿರಾಕರಿಸಿದ್ದರಂತೆ. ಈ ಕಾರಣದಿಂದ ಈ ಚಿತ್ರ ರಿಜೆಕ್ಟ್ ಮಾಡಿದ್ದರು.
2002ರಲ್ಲಿ ಚಿತ್ರರಂಗ್ಕಕೆ ಎಂಟ್ರಿ ನೀಡಿದ್ದ ಅಮೃತಾ ರಾವ್, 'ಅಬ್ ಕೇ ಬರಸ್', 'ಇಶ್ಕ್-ವಿಶ್ಕ್', 'ಮಸ್ತಿ', ಮೈ ಹೂ ನಾ, 'ವಿವಾಹ', 'ವಾಹ್ಹ ಲೈಫ್ ತೋ ಐಸಿ', 'ಶಿಖಾರ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಮೃತಾ ಕಾಣಿಸಿಕೊಂಡಿದ್ದರು.
Comments