'ಬ್ಯಾಂಕ್ ಚೋರ್' ಚಿತ್ರದ ಹೊಸ ಸಾಂಗ್ ರಿಲೀಸ್
ಮುಂಬೈ: ಬಾಲಿವುಡ್ ನಟ ರಿತೇಶ್ ದೇಶ್ಮುಕ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಬ್ಯಾಂಕ್ ಚೋರ್’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಚಿತ್ರದ ಕಥೆ ಏನಿರಬಹುದು ಎಂಬ ಕ್ಲೂ ನೀಡಲಾಗಿತ್ತು. ಇದೊಂದು ಪಕ್ಕಾ ಕಾಮಿಡಿ ಫಿಲ್ಮಂ. ಇದೀಗ ಚಿತ್ರದ ಹೊಸ ಸಾಂಗ್ ರಿಲೀಸ್ ಮಾಡಲಾಗಿದೆ.
ಈ ಚಿತ್ರದ ಹಾಡನ್ನು ಬಾಬಾ ಸೆಹಗಲ್ ಹಾಡಿದ್ದಾರೆ. ‘ರ್ಯಾಂಪ್ ನಕ್ಔಟ್’ ಸಂಗೀತವನ್ನು ಪ್ರೇಕ್ಷಕರಿಗಾಗಿ ಬಿಡುಗಡೆ ಮಾಡಿದ್ದು, ಮುಂಬೈ ವರ್ಸಸ್ ದೆಹಲಿ ಹೆಸರಿನ ಸಾಂಗ್ ಇದಾಗಿದೆ. ಬಾಕ್ಸರ್ ವಿಜೇಂದರ್ ಈ ಹಾಡು ವಿಶೇಷತೆಯನ್ನು ಹೊಂದಿದೆ.
ಈ ಹಿಂದೆ ಬ್ಯಾಂಕ್ ಕಳ್ಳತನ ಕುರಿತು ಹಲವು ಚಿತ್ರಗಳು ಬಂದು ಹೋಗಿವೆ. ಈ ಚಿತ್ರದಲ್ಲಿ ರಿತೇಶ್ ದೇಶ್ಮುಕ್ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಂಕ್ ಚೋರ್ ಚಿತ್ರವನ್ನು ಬಂಪಿ ನಿರ್ದೇಶಿಸಿದ್ದು, ಇದೇ ತಿಂಗಳ ೧೬ಕ್ಕೆ ತೆರೆಕಾಣಲಿದೆ.
Comments