'ಗಣಿತಶಾಸ್ತ್ರಜ್ಞರ' ಬಯೋಪಿಕ್ ನಲ್ಲಿ ನಟ ಹೃತಿಕ್
ಮುಂಬೈ: ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಹವಾ ತುಂಬಾ ಜೋರಾಗಿ ಕೇಳಿ ಬರುತ್ತಿದೆ. ಅಕ್ಷಯ್ ಕುಮಾರ್ ಆದ್ಮೇಲೆ ಒಬ್ಬೊಬ್ಬ ನಟ ಬಯೋಪಿಕ್ ಗೆ ಸಹಿ ಹಾಕುತ್ತಿದ್ದಾರೆ. ಸದ್ಯ ಬಾಲಿವುಡ್ ನಟ ಹೃತಿಕ್ ರೋಷನ್ ಸರದಿ.
ವಿಕಾಸ ಬಹಲ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಸೂಪರ್ ೩೦' ಚಿತ್ರದಲ್ಲಿ ನಟ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಬಿಹಾರ ಮೂಲದ ಗಣಿತಶಾಸ್ತ್ರಜ್ಞ ಆನಂದ ಕುಮಾರ್ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಹೃತಿಕ್ ರೋಷನ್ ನಟಿಸುವುದು ಫೈನಲ್ ಆಗಿದೆ.
ಮೂಲಗಳ ಪ್ರಕಾರ, ಈ ಮೊದಲು ಅಕ್ಷಯ್ ಕುಮಾರ್ ಅವರಿಗೆ ಆಫರ್ ನೀಡಲಾಗಿತ್ತು. ಆದ್ರೆ ಫೈನಲ್ ಆಗಿ ಹೃತಿಕ್ ರೋಷನ್ ಆನಂದ ಕುಮಾರ್ ಪಾತ್ರಕ್ಕೆ ಸಹಿ ಹಾಕಿದ್ದಾರೆ. ಬಿಹಾರ ಮೂಲದ ಆನಂದಕುಮಾರ್ ವೃತ್ತಿಯಲ್ಲಿ ಗಣಿತಶಾಸ್ತ್ರಜ್ಞರಾಗಿದ್ದಾರೆ. ‘ಸೂಪರ್ ೩೦’ ಎಂಬ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಪರೀಕ್ಷೆಗೆ ತಯಾರಿ ಮಾಡುತ್ತಾರೆ, ಮಕ್ಕಳಿಂದ ಯಾವುದೇ ಫೀಸ್ ತೆಗೆದುಕೊಳ್ಳವುದಿಲ್ಲ. ೨೦೦೨ರಲ್ಲಿ ಶುರುವಾದ ಕೋಚಿಂಗ್ ಸೆಂಟರ್ ಇದೀಗ ಹಲವು ಸಂಸ್ಥೆಗಳಿಗೆ ಸ್ಪರ್ಧೆ ನೀಡುತ್ತಿದೆ. ಪ್ರತಿ ವರ್ಷ ಈ ಸಂಸ್ಥೆಯಿಂದ ಐಐಟಿಗೆ ಹಲವು ಮಕ್ಕಳು ಆಯ್ಕೆಯಾಗುತ್ತಾರೆ.
Comments