ಕೋಚ್ ಹುದ್ದೆಗೆ 2 ಲೈನ್ ನಲ್ಲಿ ಸೆಹ್ವಾಗ್ ಅರ್ಜಿ, ಡಿಟೇಲ್ಸ್ ಕಳಿಸಿ ಎಂದ ಬಿಸಿಸಿಐ
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಆದ ಮೇಲೆ ಇಂಡಿಯಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ಹುದ್ದೆಗೆ ಆಯ್ಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಈ ರೇಸ್ ನಲ್ಲಿ ಮೊದಲನೇಯ ಸ್ಥಾನದಲ್ಲಿದ್ದಾರೆ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್. ಈ ಮಧ್ಯೆ ಕೋಚ್ ಹುದ್ದೆಗೆ ಕವರ್ ಲೆಟರ್ ನಲ್ಲಿ ಅರ್ಜಿ ಕಳಿಸಿರುವ ಸೆಹ್ವಾಗ್, ಕೇವಲ ೨ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಡಿಟೇಲ್ಸ್ ಇರುವ CV ಕಳುಹಿಸುವಂತೆ ಬಿಸಿಸಿಐ ತಿಳಿಸಿದೆ.
ಮೂಲಗಳ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ Kings Xi Punjab ತರಬೇತಿಗಾರ ಹಾಗೂ ಕೋಚ್ ಅಂತ ಭಾರತದ ತಂಡದ ಜತೆಗೆ ಕ್ರಿಕೆಟ್ ಮ್ಯಾಚ್ ಆಡಿದ್ದೇನೆ ಎಂದು ಸೆಹ್ವಾಗ್ ಸಲ್ಲಿಸಿರುವ ಅರ್ಜಿಯಲ್ಲಿದೆ. ಕೇವಲ ೨ ಲೈನನಲ್ಲೇ ಸೆಹ್ವಾಗ್ ಅರ್ಜಿ ಸಲ್ಲಿಸಿದ್ದು, ಜೊತೆಗೆ ಬೇರೆ ಯಾವುದೇ ಫಾರ್ಮಲ್ ಸಿ.ವಿ ಲಗತ್ತಿಸಿರಲಿಲ್ಲ. ಡಿಟೇಲ್ಸ್ ಇರುವ CV ಕಳುಹಿಸುವಂತೆ ಬಿಸಿಸಿಐ ಸೆಹ್ವಾಗ್ ಅವರಿಗೆ ತಿಳಿಸಿದೆ. ಬಳಿಕ ಸಂದರ್ಶನಕ್ಕೆ ಸೆಹ್ವಾಗ್ ಅವರನ್ನು ಕರೆಯಲಾಗುತ್ತದೆ.
Comments