ಮತ್ತೆ ಒಂದಾಗಲಿರುವ ಐಶ್ವರ್ಯ-ಅನಿಲ್ ಕಪೂರ್
ಮುಂಬೈ: ಬಾಲಿವುಡ್ ನಟಿ ಐಶ್ವರ್ಯ ರೈ ಹಾಗೂ ಅನಿಲ್ ಕಪೂರ್ ಮತ್ತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಮುಂಬರುವ ಚಿತ್ರ ‘ಫ್ಯಾನಿ ಖಾನ್’ ಶೀರ್ಷಿಕೆಯ ಚಿತ್ರದಲ್ಲಿ 17 ವರ್ಷಗಳ ಬಳಿಕ ಮತ್ತೆ ಈ ಜೋಡಿ ನಟಿಸುತ್ತಿರುವುದು ಖಚಿತವಾಗಿದೆ.
‘ತಾಲ್’, ‘ಹಮಾರಾ ದಿಲ್ ಪಾಸ್ ಹೈ’ ಸಿನಿಮಾಗಳ ಮೂಲಕ ಅನಿಲ್ ಕಪೂರ್ ಹಾಗೂ ಐಶ್ವರ್ಯ ರೈ ಜೋಡಿ ಸೂಪರ್ ಹಿಟ್ ಆಗಿತ್ತು.
ಸುದೀರ್ಘ ೧೭ ವರ್ಷಗಳ ಗ್ಯಾಪ್ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ರಾಂಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ‘ತಾಲ್’ ಜೋಡಿ ತೆರೆ ಹಂಚಿಕೊಳ್ಳಲಿದೆ.’ ಫ್ಯಾನಿ ಖಾನ್’ ಸಿನಿಮಾ ಒಂದು ಪಕ್ಕಾ ಕಾಮಿಡಿ ಸಿನಿಮಾವಂತೆ.
ಸದ್ಯ ‘ಮೇರೆ ಪ್ಯಾರೆ ಪ್ರೈಮ್ ಮಿನಿಸ್ಟರ್’ ಸಿನಿಮಾದಲ್ಲಿ ಬಿಜಿಯಾಗಿರುವ ರಾಕೇಶ್ ಮೆಹ್ರಾ ಈ ಚಿತ್ರ ಮುಗಿದ ಬಳಿಕವಷ್ಟೇ ಹೊಸ ಚಿತ್ರ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. 2015ರಲ್ಲಿ ತೆರೆ ಕಂಡ ‘ಜಜ್ಬಾ’ ಹಾಗೂ ೨೦೧೬ರಲ್ಲಿ ತೆರೆಕಂಡ ‘ಏ ದಿಲ್ ಹೇ ಮುಷ್ಕಿಲ್’ ಹಾಗೂ ಓಮಂಗ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಸರ್ಬ್ಜಿತ್ ‘ಚಿತ್ರ ಹೆಚ್ಚು ಖ್ಯಾತಿ ಗಳಿಸಿದ್ದವು.
Comments