ಟಾಲಿವುಡ್ ಗೆ ಸ್ನೇಹಾ ಉಳ್ಳಾಲ್

ನವದೆಹಲಿ: ಸಲ್ಮಾನ್ ಖಾನ್ ಜೊತೆಗೆ ಫಿಲ್ಮಂ 'ಲಕ್ಕಿ' ಯಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಸ್ನೇಹ ಉಳ್ಳಾಲ್ ನಾಲ್ಕು ವರ್ಷದಿಂದ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ೨೦೦೫ರಲ್ಲಿ ಸಲ್ಮಾನ್ ಖಾನ್ ನಾಯಕ ನಟನಾಗಿ ನಟಿಸಿದ್ದ 'ಲಕ್ಕಿ' ಚಿತ್ರದಲ್ಲಿ ಸ್ನೇಹಾ ಬಗ್ಗೆ ಚರ್ಚೆ ಕೂಡ ನಡೆದಿದ್ವು. ಐಶ್ವರ್ಯ ರೈ ಹಾಗೇ ಹೋಲಿಕೆ ಇದ್ದ ಸ್ನೇಹಾರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದು ನಟ ಸಲ್ಮಾನ್ ಖಾನ್.
ಈ ವೇಳೆ ಸ್ನೇಹಾ ನಟಿ ಐಶ್ವರ್ಯ ರೈ ಹೋಲಿಕೆ ಇದೆ ಎಂದು ಚರ್ಚೆ ನಡೆಯುವುದಕ್ಕೆ ಶುರುವಾಗಿದ್ದವು. ಜೂನಿಯರ್ ಐಶ್ವರ್ಯ ರೈ ಅಂತಲೇ ಸ್ನೇಹಾ ಫೇಮಸ್ ಕೂಡ ಆದರು. ೨೦೧೪ರಲ್ಲಿ ತೆರೆ ಕಂಡ ತಮಿಳು ಚಿತ್ರದಲ್ಲಿ ನಟಿಸಿದ ಬಳಿಕ ಸ್ನೇಹ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆದ್ರೆ ಇದೀಗ ಮತ್ತೆ ಸ್ನೇಹಾ ಉಳ್ಳಾಲ್ ಬಣ್ಣ ಹಚ್ಚಲು ಬಂದಿದ್ದಾರೆ.
ಇತ್ತೀಚೆಗೆ ಟೈಮ್ಸ್ ಜತೆಗೆ ನೀಡಿದ ಸಂದರ್ಶನಯಲ್ಲಿ ಅವರು ಈ ರೀತಿ ಹೇಳಿದ್ದಾರೆ, ಚಿತ್ರರಂಗಕ್ಕೆ ನಾನು ಮತ್ತೆ ಬಣ್ಣ ಹಚ್ಚುತ್ತಿರುವುದಕ್ಕೆ ಕಮ್ ಬ್ಯಾಕ್ ಅಲ್ಲ. ಕಮ್ ಬ್ಯಾಕ್ ಆಗುವುದಕ್ಕೆ ನಾನು ಚಿತ್ರರಂಗಕ್ಕೆ ಗುಡ್ ಬೈ ಹೇಳಿಲ್ಲ, ಆದಕಾರಣ ಕಮ್ ಬ್ಯಾಕ್ ಎನ್ನುವ ಪ್ರಶ್ನೆಯೇ ಬರುವುದಿಲ್ಲ, ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಚಿತ್ರಗಳಲ್ಲಿ ನಟಿಸಿರಲಿಲ್ಲ. ಚಿತ್ರರಂಗದಿಂದ ದೂರವಿರಲು ಇದುವೇ ಕಾರಣವಾಗಿತ್ತು ಎಂದು ಹೇಳಿದ್ದಾರೆ.
ಅಭಿಮಾನಿಗಳು ನಾನು ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಿದ್ದರು. ನಾಲ್ಕು ವರ್ಷದ ವರೆಗೂ ಎಲ್ಲಿ ಕಾಣೆಯಾಗಿದ್ದೆ ಎಂದು ಫ್ಯಾನ್ಸ್ ಭಾವಿಸಿದ್ದರು ಎಂದು ಸ್ನೇಹಾ ಇದೇ ವೇಳೆ ಹೇಳಿದರು. ಮತ್ತೆ ನಾಲ್ಕು ವರ್ಷಗಳ ಬಳಿಕ ನಟಿ ಸ್ನೇಹಾ ಉಳ್ಳಾಲ ಟಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರಂತೆ.
Comments