ಶೀರ್ಘದಲ್ಲೇ ರಕ್ಷಿತ್ ಶೆಟ್ಟಿ- ರಶ್ಮಿಕಾ ಎಂಗೇಜ್ ಮೆಂಟ್?
ಕಿರಿಕ್ ಪಾರ್ಟಿ ಚಿತ್ರದ ಜನಪ್ರಿಯ ಜೋಡಿಯಾಗಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಶೀರ್ಘದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ.ಸದ್ಯದಲ್ಲೇ ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರು ಮದುವೆಯಾಗಲಿದ್ದಾರಂತೆ. ಅವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಸುದ್ದಿ ಕೇಳಿ ಬರುತ್ತಿದೆ.
ಇನ್ನೊಂದು ತಿಂಗಳಿಗೆ ಸರಿಯಾಗಿ ಅಂದರೆ ಜುಲೈ ೩ಕ್ಕೆ ರಕ್ಷಿತ್ ಹಾಗೂ ರಶ್ಮಿಕಾ ಎಂಗೇಜ್ ಮೆಂಟ್ ಕುಶಾಲ ನಗರದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ರಕ್ಷಿತ್ ಹಾಗೂ ರಶ್ಮಿಕಾ ಮದುವೆ ಸುದ್ದಿ ಬರುತ್ತಿದ್ದಂತೆ ನಿರಾಕರಿಸುತ್ತಲೇ ಇದ್ದರು. ತುಂಬಾ ಬಿಝಿ ಇರುವುದರಿಂದ ಸದ್ಯದಲ್ಲಿ ಮದುವೆ ಯೋಚನೆ ಮಾಡಿಲ್ಲ ಎಂದು ರಕ್ಷಿತ್ ಹಲವು ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದ್ರೆ ಒಂದೆ ತಿಂಗಳಲ್ಲಿ ಇಬ್ಬರ ಎಂಗೇಜ್ ಮೆಂಟ್ ಫಿಕ್ಸ್ ಆಗಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ.
Comments