ಬಾಲಿವುಡ್ ಇಂಡಸ್ಟ್ರಿಗೆ ಊರ್ಮಿಳಾ ‘ಕಮ್ ಬ್ಯಾಕ್’

ಸಿನಿಮಾ ಯಾನದ ಮೂಲಕ ಸಿನಿಮಾ ಜಗತ್ತಿಗೆ ಎಂದು ಮರೆಯಲಾಗದ ನೆನಪನ್ನು ನೀಡಿದವರು ಬಾಲಿವುಡ್ ಬೆಡಗಿ ಊರ್ಮಿಳಾ ಮಾಂತೋಡ್ಕರ್, ಅವರು ಬಾಲಿವುಡ್ ನಲ್ಲಿ ಊರ್ಮಿಳಾ ಮಾಂತೋ಼ಡ್ಕರ್ ಮತ್ತೆ ಮರಳಿ ಬಣ್ಣ ಹಚ್ಚಲು ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶೀರ್ಘದಲ್ಲೇ ನಟಿ ಊರ್ಮಿಳಾ ಬಾಲಿವುಡ್ ಇಂಡಸ್ಟ್ರಿಗೆ ಕಮ್ ಬ್ಯಾಕ್ ಆಗಲಿದ್ದಾರಂತೆ. ಮಾಹಿತಿ ಪ್ರಕಾರ ಇರ್ಫಾನ್ ಖಾನ್ ಅಭಿನಯದ ಚಿತ್ರದಲ್ಲಿ ‘ಐಟಂ ನಂಬರ್’ ಪಾತ್ರಕ್ಕಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಇರ್ಫಾನ್ ಖಾನ್ ಅವರ ಮುಂಬರುವ ಚಿತ್ರದಲ್ಲಿ ಐಟಂ ಗರ್ಲ್ ಆಗಿ ರಂಗೀಲಾ ನಟಿ ಮಿಂಚಲಿದ್ದು, ಕಳೆದ ವರ್ಷ ಬ್ಯುಸಿನೆಸ್ ಮ್ಯಾನ್ ಅಖ್ತರ್ ಜತೆಗೆ ವಿವಾಹವಾಗಿದ್ದರು. ಅದಾದ ಮೇಲೆ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ಅವರು ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಈ ಹಿಂದೆ ನಟ ಹಿಮೇಶ್ ರೆಶಮೀಯಾ ಜತೆಗೆ 'ಕರ್ಜ್' ಚಿತ್ರದಲ್ಲಿ ಸವಾಲಿನ ಪಾತ್ರದಲ್ಲಿ ನಟಿಸಿ ಊರ್ಮಿಳಾ ಮಾಂತೋಡ್ಕರ್ ಮನೆ ಮಾತಾದರು. ರಂಗೀಲಾ ನಟಿ ಊರ್ಮಿಳಾ ಮತ್ತೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ.
Comments