ದುಬೈ ಶ್ರೀಮಂತ ಮಕ್ಕಳ ಲೈಫ್ ಸ್ಟೈಲ್ ಹೇಗಿರುತ್ತೆ ಗೊತ್ತಾ..!!
ದುಬೈ : ದುಬೈನ ಆಷಾರಾಮಿ ಜೀವನ ಇಡೀ ಜಗತ್ತನ್ನೇ ಆಕರ್ಷಿಸುತ್ತಿದೆ. ದುಬೈನಲ್ಲಿರುವ ಗಗನಚುಂಬಿ ಕಟ್ಟಡಗಳು ಎಲ್ಲರನ್ನು ಸೆಳೆಯುತ್ತವೆ. ಆದ್ರೆ ದುಬೈನಲ್ಲಿರೋ ಶ್ರೀಮಂತ ಮಕ್ಕಳ ಶೈಲಿ ಹೇಗಿರುತ್ತೆ ಅಂತಾ ಕೇಳಿದ್ರೆ ನೀಮಗೂ ಆಶ್ಚರ್ಯ ಅನ್ನಿಸುತ್ತೆ. ಈ ಮಕ್ಕಳ ಜೀವನ ಶೈಲಿ ಹೇಗಿದೆ ನೋಡಿ...
- ಇಲ್ಲಿ ಮಕ್ಕಳಿಗಾಗಿಯೇ ರಿಚ್ ಕಿಡ್ಸ್ ಆಫ್ ದುಬೈ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಇದೆಯಂತೆ. ೨೦೧೬ರಲ್ಲಿ ಆರಂಭವಾದ ಈ ಅಕೌಂಟ್ ಇದುವರೆಗೂ ೩೭೭ ಫೊಟೋಗಳನ್ನು ಪೋಸ್ಟ್ ಮಾಡಲಾಗಿದೆ.
- ಅಲ್ದೇ, ದುಬೈನಲ್ಲಿ ಮಕ್ಕಳು ಜಗತ್ತಿನ ಸ್ಠೈಲಿಶ್ ಹಾಗೂ ಅತಿ ದುಬಾರಿಯ ಕಾರುಗಳನ್ನು ಸಂಗ್ರಹಿಸುತ್ತಾರಂತೆ.
- ಜಗತ್ತಿನ ಇನ್ನಿತರ ಮಕ್ಕಳು ಸಾಕು ಪ್ರಾಣಿಗಳ ಜತೆಗೆ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ.. ಆದ್ರೆ ದುಬೈನ ಮಕ್ಕಳು ಮಾತ್ರ ವಿಭಿನ್ನ.. ಇಲ್ಲಿನ ಮಕ್ಕಳು ಹುಲಿ ಹಾಗೂ ಚಿರತೆಗಳನ್ನು ಸಾಕುತ್ತಾರಂತೆ. ಅಲ್ದೇ ಅವುಗಳ ಮೇಲೆ ಕುಳಿತು ಸೆಲ್ಫಿ ಕೂಡ ತೆಗೆದುಕೊಳ್ತಾರಂತೆ. ಅಪಾಯಕಾರಿ ಪ್ರಾಣಿಗಳ ಜತೆಗೆ ಸೆಲ್ಫಿ ತೆಗೆದುಕೊಳ್ಳುವುದು ಇಲ್ಲಿನ ಮಕ್ಕಳಿಗೆ ತುಂಬಾ ಕ್ರೇಜ್ ಇದೆಯಂತೆ.
Comments