ಶ್ರಿದೇವಿ 'ಹವಾ ಹವಾಯಿ' ಸಾಂಗ್ ವಿದ್ಯಾ ಸ್ಟೆಪ್

ಮುಂಬೈ : ಸುರೇಶ್ ತ್ರಿವೇಣಿ ನಿರ್ದೇಶನದಲ್ಲಿ ಮೂಡಿ ಬರಲಿರುವ 'ತುಮ್ಹಾರಿ ಸುಲು' ಚಿತ್ರಕ್ಕೆ ವಿದ್ಯಾ ನಾಯಕಿ. ವಿಶೇಷವೆಂದ್ರೆ ಶ್ರೀದೇವಿ ಅವರ ಮಿಸ್ಟರ್ ಇಂಡಿಯಾ ಚಿತ್ರದ 'ಹವಾ ಹವಾಯಿ' ಗೀತೆಗೆ ಸ್ಟೆಪ್ ಕೂಡ ಹಾಕಲಿದ್ದಾರೆ.
ಇದೊಂದು ಮನೋರಂಜನಾತ್ಮಕ ಸಿನಿಮಾ. ಈ ಚಿತ್ರದಲ್ಲಿ ವಿದ್ಯಾ ಅರ್ಥಾತ್ ಚಿತ್ರದ ನಾಯಕ ಮಾನವ್ ಕೌಲ್ ನಟನಾಗಿ ಆಯ್ಕೆಯಾಗಿದ್ದಾರೆ. ಸುಲು ಪಾತ್ರದ ಮೂಲಕ ನನ್ನ ತುಂಟತನ, ಹಠಮಾರಿತನ ಅನಾವರಣಗೊಂಡಿದೆ ಎಂದು ವಿದ್ಯಾ ಹೇಳಿಕೊಂಡಿದ್ದರು.
ಇದೇ ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ವಿದ್ಯಾಗೆ ಜತೆಯಾಗಿ ಕಾಣಿಸಿಕೊಳ್ಳಲಿರುವ ನಾಯಕ ನಟ ಮಾನವ್ ಈ ಚಿತ್ರದಲ್ಲಿ ಕಾರ್ಖಾನೆ ಮ್ಯಾನೇಜರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿದ್ಯಾ ಬಾಲನ್ ರೇಡಿಯೋ ಜಾಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಮಾತ್ರವಲ್ಲ, ಇಲ್ಲಿ ಅವರದ್ದು ಸಂಗೀತ ಸಂಬಂಧಿಸಿದ ಪಾತ್ರವಾಗಿರುವುದರಿಂದ ಈಗಾಗಲೇ ಹಾಡುವುದನ್ನು ಅಭ್ಯಾಸ ಮಾಡುತ್ತಿದ್ದಾರೆ.
Comments