ಶಾರುಖ್ ಸಿನೆಮಾ ಶೂಟಿಂಗ್ ನಲ್ಲಿ ನಡೀತು ಅವಘಡ

ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಹಲವು ಬಾರಿ ಗಾಯಗೊಂಡಿದ್ದಾರೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಚಿತ್ರದ ಶೂಟಿಂಗ್ ನಲ್ಲಿ ನಡೆದ ಅವಘಡವೊಂದರಲ್ಲಿ ಕಿಂಗ್ ಖಾನ್ ಪಾರಾಗಿದ್ದಾರೆ. ಚಿತ್ರತಂಡದ ಕೆಲವು ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಿತ್ರದ ಸೆಟ್ ನಲ್ಲಿ ನಡೆದ ಘಟನೆ ಇದು. ಶಾರುಖ್ ಕುಳಿತಿದ್ದ ಎದುರಿನಲ್ಲೇ ಇದ್ದಕ್ಕಿದ್ದಂತೆ ಛಾವಣಿಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಅವಶೇಷಗಳು ಶಾರುಖ್ ಬಳಿ ಬಿದ್ದಿಲ್ಲ. ಆದ್ರೆ ಕೆಲವು ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯ್ತು.
ಅವಘಡದ ಹಿನ್ನೆಲೆಯಲ್ಲಿ 2 ದಿನ ಚಿತ್ರೀಕರಣ ಬಂದ್ ಮಾಡಲಾಯ್ತು. ಅಪಘಾತದಲ್ಲಿ ಶಾರುಖ್ ಬಚಾವಾಗಿರೋ ಸುದ್ದಿ ಕೇಳಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಹಾಗೂ ಕತ್ರೀನಾ ಕೈಫ್ ಕೂಡ ನಟಿಸುತ್ತಿದ್ದಾರೆ. ಅನುಷ್ಕಾ ಮಾನಸಿಕ ಅಸ್ವಸ್ಥೆಯ ಪಾತ್ರ ಮಾಡಲಿದ್ದಾರೆ. ಯಶ್ ಚೋಪ್ರಾರ ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲೂ ಅನುಷ್ಕಾ, ಕತ್ರೀನಾ ಹಾಗೂ ಶಾರುಖ್ ಜೊತೆಯಾಗಿ ಅಭಿನಯಿಸಿದ್ದರು.
Comments