ಕನ್ನಡ ಚಿತ್ರದಲ್ಲಿ ಜೂಹಿ ಚಾವ್ಲಾ ?
ತಮ್ಮದೇ ಆದ ಅಮೋಘ ನಟನೆಯಿಂದ ಕನ್ನಡ ಚಿತ್ರ ರಸಿಕರ ಮನ ಗೆದಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ಕನ್ನಡದ ಕಿನ್ನರಿ ಜೋಗಿ, ಪ್ರೇಮಲೋಕ ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಆದ್ರೆ ಮತ್ತೆ ಕನ್ನಡದ ಚಿತ್ರದಲ್ಲಿ ಜೂಹಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಕನ್ನಡದ ವೆರಿ ಗುಡ್ 10/10 ಚಿತ್ರದಲ್ಲಿ ಜೂಹಿ ಚಾವ್ಲಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಜೀಹಿ ಸಂಗೀತ ಶಿಕ್ಷಕಿಯ ಪಾತ್ರ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಪಾತ್ರಕ್ಕಾಗಿ ಜೂಹಿ ಲಂಡನ್ ವಿದ್ಯಾ ಭವನದಲ್ಲಿ ವಿಶ್ವ ಪ್ರಕಾಶ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾರಂತೆ. ಭಾರತಕ್ಕೆ ಮರಳಿದ ಬಳಿಕ ನಟಿ ಪದ್ಮಿನಿ ಕೊಲ್ಹಾಪುರಿ ಅವರ ತಂದೆಯ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಲಿದ್ದಾರೆ. ಈ ಚಿತ್ರದ ಎರಡು ಹಾಡುಗಳಲ್ಲಿ
ಜೂಹಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಯಶವಂತ್ ಸರ್ ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಒಂದು ವೇಳೆ ಜೂಹಿ ಚಾವ್ಲಾ ಕನ್ನಡ ಚಿತ್ರದಲ್ಲಿ ನಟಿಸುವುದು ಕನ್ಫರ್ಮ್ ಆದ್ರೆ ವಿಭಿನ್ನ ಪಾತ್ರದಲ್ಲಿ ನಟಿ ಜೂಹಿ ಅವರನ್ನು ನೋಡ್ಬಹುದು.
Comments