ನಟ ಪ್ರಭಾಸ್ ಮದುವೆ ಫಿಕ್ಸ್?



ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ ಹೆಸರು ಎಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದೆ. ಪ್ರಭಾಸ ಸುಮಾರು ೬೦೦೦ ಸಾವಿರ ಮದುವೆ ಪ್ರಸ್ತಾಪವನ್ನು ಬೇಡ ಎಂದು ಹೇಳಿದ್ರು ಅಂತ ಕೆಲ ದಿನದ ಹಿಂದೆ ಸುದ್ದಿಯಾಗಿತ್ತು. ಆದ್ರೆ ಸದ್ಯದ ಮಾಹಿತಿ ಪ್ರಕಾರ ನಟ ಪ್ರಭಾಸ್ ಮದುವೆ ನಿಶ್ಚಯವಾಗಿದೆಯಂತೆ.
ಮೂಲಗಳ ಪ್ರಕಾರ, ಶೀರ್ಘದಲ್ಲೇ ಪ್ರಭಾಸ್ ಮದುವೆಯಾಗಲಿದ್ದು, ಸಿಮೆಂಟ್ ಕಾರ್ಖಾನೆ ಉದ್ಯಮಿಯೊಬ್ಬರ ಮೊಮ್ಮಗಳ ಜತೆಗೆ ಪ್ರಭಾಸ ಮದುವೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ. ಪ್ರಭಾಸ ಕೂಡ ಮದುವೆಗೆ ಒಪ್ಪಿಕೊಂಡಿದ್ದಾರಂತೆ.
ಆದ್ರೆ ಇದುವರೆಗೂ ಅಧಿಕೃತವಾಗಿ ಪ್ರಭಾಸ ಆಗಲಿ, ಅವರ ಕುಟುಂಬದವರಾಗಲಿ ಪ್ರತಿಕ್ರಿಯೆ ನೀಡಿಲ್ಲ ಎಂಬುದು ತಿಳಿದು ಬಂದಿದೆ.
‘ಬಾಹುಬಲಿ’ ಸಿನಿಮಾಗಾಗಿ ಐದು ವರ್ಷಗಳವರೆಗೂ ಬ್ಯೂಸಿಯಾಗಿದ್ದ ನಟ ಪ್ರಭಾಸ್, ಇದೀಗ ಬ್ರೇಕ್ ತೆಗೆದುಕೊಂಡಿದ್ದಾರೆ. ೩೭ ವರ್ಷದ ಪ್ರಭಾಸ್ ಸದ್ಯ ಅಮೇರಿಕಾದಲ್ಲಿ ತಮ್ಮ ಸ್ನೇಹಿತರ ಜತೆಗೆ ಹಾಲಿ ಡೇ ಕಳೆಯುತ್ತಿದ್ದಾರೆ. ಜೂನ್ ಫಸ್ಟ್ ವೀಕ್ ನಲ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.
Comments