ಸಚಿನ್ 'ಎ ಬಿಲಿಯನೇರ್ ಡ್ರೀಮ್ಸ್'ಗೆ, ಫುಲ್ ರೆಸ್ಪಾನ್ಸ್
ಕನಸುಗಳನ್ನು ಬಿತ್ತುವ ಆಟಗಾರ ಸಚಿನ್, ವಿನಯವಂತಿಕೆಗೆ ಮತ್ತೊಂದು ಹೆಸರೇ ಸಚಿನ್, ಸಚಿನ್ ತೆಂಡೂಲ್ಕರ್ ಅವರ ಶಕ್ತಿ, ಪರಿಶ್ರಮ, ಶ್ರದ್ಧೆ ಬಗ್ಗೆ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಿರಲ್ಲ. ಆದರೆ ಸಚಿನ್ ಲೈಫ್ ಸ್ಟೈಲ್ ಬಗ್ಗೆ ತಿಳಿಸುವ ಪ್ರಯತ್ನವನ್ನು 'ಐ ಬಿಲಿಯನ್ ಡ್ರೀಮ್ಸ್' ಚಿತ್ರ ಮಾಡುತ್ತಿದೆ. ಈಗಾಗ್ಲೇ ಈ ಚಿತ್ರ ತೆರೆ ಕಂಡ ೩ ದಿನದಲ್ಲೇ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಮೂಡಿಸುತ್ತಿದೆ. ಸದ್ಯ ರಿಲೀಸ್ ಆದ ೩ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ೨೭.೮೫ ಕೋಟಿಯಷ್ಟು ಗಳಿಕೆ ಕಂಡಿದೆ.
ಈ ಬಗ್ಗೆ ಬಾಲಿವುಡ್ ವಾಣಿಜ್ಯ ವಿಶ್ಲೇಷಕ ತರುಣ್ ಆದರ್ಷ ಟ್ವೀಟ್ ಮಾಡಿದ್ದು, ಸಚಿನ್ ಬಿಲಿಯನ್ಸ್ ಡ್ರೀಮ್ಸ್ ಶುಕ್ರವಾರ ೮.೪೦ ಕೋಟಿ, ಶನಿವಾರದಂದು ೯.೨೦ ಕೋಟಿ, ಅದರಂತೆ ಭಾನುವಾರ ೧೦.೨೫ ಕೋಟಿ, ಒಟ್ಟಾರೆ ೨೭. ೮೫ ಕೋಟಿಯಷ್ಟು ಆದಾಯ ಗಳಿಸಿದೆ ಎಂದು ತರುಣ್ ಆದರ್ಶ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ, ಒಡಿಶಾ, ಕೇರಳದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ ಎಂದು ತಿಳಿದು ಬಂದಿದೆ.
ಬ್ರಿಟಿಷ್ ಚಿತ್ರ ನಿರ್ಮಾಪಕ ಜೇಮ್ಸ್ ಅರೆಸ್ಕೈನ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಚಿನ್ ಅವರ ಬಾಲ್ದಯ ತುಂಟತನ, ಪ್ರೀತಿಯ ವಾತಾವರಣ, ಸಚಿನ್ ಕ್ರಿಕೆಟ್ ಕಿಚ್ಚನ್ನು ಹುಟ್ಟಿದ್ದು ಹೇಗೆ, ಅವರ ಕುಟುಂಬದವರು, ಲೈಫ್ ಸ್ಟೈಲ್ ಬಗ್ಗೆ ಬೆಳಕು ಚೆಲ್ಲುತ್ತದೆ.
Comments