Missing.. ನಿಗೂಢವಾಗಿ ಕಣ್ಮರೆಯಾದ ರೂಪದರ್ಶಿ!
ಚೈನ್ನೈ: ಚೈನ್ನೈನ ಮಾಡೆಲ್ ೨೮ ವರ್ಷದ ಗಾನಂ ನಾಯರ್ ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.
ಚೈನ್ನೈನ ಖಾಸಗಿ ಟಿವಿ ಚಾನಲ್ ನ ಪ್ರೊ಼ಡೆಕ್ಷನ್ ಹೌಸ್ ನಲ್ಲಿ ಸ್ಕ್ರೀನ್ ಪ್ಲೇ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಗಾನಂ, ಮೇ ೨೬ರಂದು ವಿರುಗಂಬಾಕ್ಕಂನ ತಮ್ಮ ನಿವಾಸದಿಂದ ಹೋಂಡಾ ಆಕ್ಟಿವಾದಲ್ಲಿ ಹೋರ ಹೋಗಿದ್ದರು. ಆದ್ರೆ ನಾಲ್ಕು ದಿನಗಳಾದ್ರು ಅವರು ತಮ್ಮ ನಿವಾಸಕ್ಕೆ ಹಿಂತಿರುಗಿರಲಿಲ್ಲ, ಗಾನಂ ನಾಯರ್ ಸಂಬಂಧಿಕರು ಮೊಬೈಲ್ ಗೆ ಸಂಪರ್ಕ ಮಾಡಿದ್ರು ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು, ಗಾಬರಿಗೊಂಡ ಸಂಬಂಧಿಕರು ಕೆಕೆ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.
ಸಂಬಂಧಿಕರ ನಿವಾಸದಲ್ಲಿ ವಾಸವಿದ್ದ ಗಾನಂ, ಅವರ ತಂದೆ ಮೂಲತಃ ದೆಹಲಿಯವರಾಗಿದ್ದು, ಕೆಲ ವರ್ಷದ ಹಿಂದೆ ತಾಯಿ ನಿಧನರಾಗಿದ್ದರು. ಮಾಹಿತಿ ಪ್ರಕಾರ. ಗಾನಂ ತಮ್ಮ ಕುಟುಂಬದವರ ಜತೆಗೆ ಮದುವೆ ವಿಚಾರವಾಗಿ ಮನಸ್ತಾಪ ಮಾಡಿಕೊಂಡಿದ್ದರು ಎಂದು ತನಿಖಾಧಿಕಾರಿಯೊಬ್ಬರು ಖಾಸಗಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗಾನಂ ಸ್ನೇಹಿತರೊಬ್ಬರು ನಾಪತ್ತೆ ಕುರಿತು ಪೋಸ್ಟ್ ಮಾಡಿದ್ದಾರೆ. ಮಾಡೆಲ್ ಗಾನಂ ಬಗ್ಗೆ ಸುಳಿವು ಸಿಕ್ಕವರು ಅವರ ಆಂಟಿ ಮಹಿಜಾ ಅವರಿಗೆ ಕರೆ ಮಾಡುವಂತೆ ಫೋನ್ ನಂಬರ್ ನೀಡಿದ್ದಾರೆ. ಸದ್ಯ ಮಾಡೆಲ್ ನಾಪತ್ತೆ ಕುರಿತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Comments