ಪಾರ್ವತಮ್ಮ ಸ್ಥಿತಿ ಮತ್ತಷ್ಟು ಗಂಭೀರ; ನಟ ಶಿವಣ್ಣ ಆತಂಕ
ಡಾ.ರಾಜ್ ಕುಮಾರ್ ಪತ್ನಿ, ಹಿರಿಯ ನಿರ್ಮಾಪಕಿ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದೆ. ರಕ್ತದೊತ್ತಡ, ಪಲ್ಸ್ ನಿರ್ವಹಣೆ ಮಾಡಲಾಗಿದ್ದರೂ ಜ್ವರ ಇರುವುದರಿಂದ ಪಾರ್ವತಮ್ಮ ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಕುರಿತು ಅವರಿಗೆ ಚಿಕಿತ್ಸೆ ನೀಡುತ್ತಿರುವ ಸಂಜಯ್ ಕುಲಕರ್ಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಜ್ವರ ಇರುವುದರಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಆದರೂ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು. ಎಂ.ಎಸ್.ರಾಮಯ್ಯ ಆಸ್ಪತ್ರೆಯ ನಿರ್ದೇಶಕ ಪಟ್ಟಾಭಿರಾಮ್ ಮಾತನಾಡಿ, ಪಾರ್ವತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯ ಬಗ್ಗೆ ಇಡೀ ಚಿತ್ರರಂಗ ಕಾಳಜಿ ವಹಿಸಿದೆ ಎಂದರು.
ಇದೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಟ ಶಿವರಾಜ್ ಕುಮಾರ್ ಮಾತನಾಡಿ, ನಿನ್ನೆಗೆ ಹೋಲಿಸಿದರೆ ಇವತ್ತು ಸ್ವಲ್ಪ ತಮ್ಮ ತಾಯಿಯ ಆರೋಗ್ಯ ಗಂಭೀರವಾಗಿದೆ ಎಂದರು. ಟೆಕ್ರಾಸ್ಟಮಿ ಮಾಡಿದ್ದರಿಂದ ಸ್ವಲ್ಪ ಜ್ವರ ಕಾಣಿಸಿಕೊಂಡಿದೆ. ಇನ್ನು ಭರವಸೆ ಇಟ್ಟುಕೊಂಡಿದ್ದೇವೆ ಎಂದು ಶಿವಣ್ಣ ಹೇಳಿದರು.
Comments