ಜೂ.11ಕ್ಕೆ ಯೋಗಿ, ಸಾಹಿತ್ಯ ನಿಶ್ಚಿತಾರ್ಥ; ನವೆಂಬರ್ 2ಕ್ಕೆ ವಿವಾಹ
ಬೆಂಗಳೂರು:ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮಕ್ಕೆ ತಯಾರಿ ನಡೆಯುತ್ತಿದ್ದು, ನಟ ಯೋಗಿ ಹಾಗೂ ಬಾಲ್ಯ ಸ್ನೇಹಿತೆ ಸಾಹಿತ್ಯ ನಿಶ್ಚಿತಾರ್ಥಕ್ಕೆ ವೇದಿಕೆ ಸಿದ್ಧವಾಗಿದೆ.
ಜೂನ್ 11ರಂದು ಯೋಗಿ ಹಾಗೂ ಸಾಹಿತ್ಯ ನಿಶ್ಚಿತಾರ್ಥ ನಡೆಯಲಿದೆ. ನವೆಂಬರ್ 2ರಂದು ಯೋಗಿ ಮತ್ತು ಸಾಹಿತ್ಯ ಅರಸ್ ಮದುವೆ ಸಮಾರಂಭ ನಡೆಯಲಿದೆ ಎಂದು ಯೋಗಿ ತಂದೆ ಸಿದ್ಧರಾಜು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಾಹಿತ್ಯ ಮೈಸೂರು ಮೂಲದವರಾಗಿದ್ದು, ಯೋಗಿ ಹಾಗೂ ಸಾಹಿತ್ಯ ಬಾಲ್ಯದಿಂದಲೇ ಜೊತೆಗೆ ವಿದ್ಯಾಭ್ಯಾಸ ಮಾಡಿದವರು, ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ. ನಾವು ಮನೆಯವರು ಇಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದೇವೆ ಎಂದು ಯೋಗಿ ತಂದೆ ಹೇಳಿದರು. ಆದರೆ ನಿಶ್ಚಿತಾರ್ಥ ಮತ್ತು ಮದುವೆ ಅದ್ದೂರಿಯಾಗಿ ನಡೆಯುವುದಿಲ್ಲ, ಸಣ್ಣ ಪ್ರಮಾಣದಲ್ಲಿ ಎಲ್ಲ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.
Comments