3ನೇ ಮದುವೆಯ ಯೋಚನೆಮಾಡುತಿರುವ ಬಾಲಿವುಡ್ ನ ಮಿಸ್ಟರ್ಪರ್ಫೆಕ್ಷನಿಸ್ಟ್..!

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮೂರನೇ ಮದ್ವೆಯಾಗ್ತಿದ್ದಾರಾ? ಹೀಗೊಂದು ಪ್ರಶ್ನೆ ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಾ ಇದೆ. ಮೂಲಗಳ ಪ್ರಕಾರ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ನಡುವಣ ಬಾಂಧವ್ಯ ಹಳಸಿದೆಯಂತೆ. ಇಬ್ಬರ ಮಧ್ಯೆ ಮನಸ್ತಾಪ ಹೆಚ್ಚಿದ್ದು, ಕಿತ್ತಾಡಿಕೊಳ್ತಿದ್ದಾರಂತೆ.
ಇದಕ್ಕೆ ಕಾರಣ ಅಮೀರ್ ಖಾನ್ ಹಾಗೂ ನಟಿ ಫಾತಿಮಾ ಸನಾ ಶೇಕ್ ನಡುವಣ ಆತ್ಮೀಯತೆ ಜಾಸ್ತಿಯಾಗಿರೋದು. ಇದಕ್ಕೆ ಸಾಕ್ಷಿ ಎಂಬಂತೆ ಅಮೀರ್ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರಕ್ಕೆ ನಾಯಕಿಯಾಗಿ ಫಾತಿಮಾಗೆ ಚಾನ್ಸ್ ಕೊಡಿಸಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ವಾಣಿ ಕಪೂರ್ ಳನ್ನು ಹಾಕಿಕೊಂಡು ಸಿನೆಮಾ ಮಾಡುವ ಆಲೋಚನೆಯಲ್ಲಿದ್ರು.
ಆದ್ರೆ ಅಮೀರ್ ಖಾನ್ ಫಾತಿಮಾಳನ್ನೇ ಹಿರೋಯಿನ್ ಮಾಡುವಂತೆ ಆದಿತ್ಯ ಚೋಪ್ರಾ ಬಳಿ ಕೇಳ್ಕೊಂಡಿದ್ದಾರಂತೆ. ಸಂದರ್ಶನಗಳಲ್ಲಿ ಕೂಡ ಅಮೀರ್ ಮತ್ತು ಫಾತಿಮಾ ನಡುವಣ ಆತ್ಮೀಯತೆ ಬೆಳಕಿಗೆ ಬಂದಿತ್ತು. ಅಮೀರ್ ಮಗಳಾಗಿ ನಟಿಸಲು ಇಷ್ಟವಿಲ್ಲ, ಅವರ ಜೊತೆ ರೊಮ್ಯಾನ್ಸ್ ಮಾಡಬೇಕು ಅಂತಾ ಫಾತಿಮಾ ನೇರವಾಗಿಯೇ ಹೇಳಿಕೊಂಡಿದ್ಲು.
‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೂ ಅಮೀರ್ – ಫಾತಿಮಾ ಜೊತೆಯಾಗಿ ಬಂದಿದ್ರು. ಮೊದಲ ಪತ್ನಿ ರೀನಾ ದತ್ತಾರಿಂದ ವಿಚ್ಛೇದನ ಪಡೆದಿದ್ದ ಅಮೀರ್, 2005ರ ಡಿಸೆಂಬರ್ ನಲ್ಲಿ ಕಿರಣ್ ರಾವ್ ರನ್ನು ಮದುವೆಯಾಗಿದ್ರು.
Comments