ಟ್ಯೂಶನ್ನಿಂದ ಮುಗಿಸಿ ಮರಳುತ್ತಿದ್ದ 10 ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು
10ನೇ ತರಗತಿಯ ವಿದ್ಯಾರ್ಥಿನಿಯನ್ನು ಕಾಮುಕರು ಅಪಹರಿಸಿ ಗ್ಯಾಂಗ್ರೇಪ್ ಮಾಡಿ ವಿಷ ಕುಡಿಸಿ ಸಾಯಿಸಿದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸರ್ದಾನ ಕೋಟ್ವಾಲಿ ಪ್ರದೇಶದ ಬಳಿ ಆಕೆಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ, ನಂತರ ಆಕೆಗೆ ವಿಷ ನೀಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅದೇ ಕಂಡೀಷನ್ನಲ್ಲಿ ಮನೆಗೆ ಬಂದಿದ್ದಾಳೆ. ಕೂಡಲೇ ಘಟನೆ ಕುರಿತು ವಿವರಣೆ ನೀಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಕುಟುಂಬ ಸದಸ್ಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ದೂರು ದಾಖಲಿಸಿದ್ದಾರೆ. ಅಲ್ಲದೇ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡ ಪೊಲೀಸರು ದಬೀಶ್ ಜರಿಯಮಾಲಾ ಎಂಬಾತನನ್ನು ಬಂಧಿಸಿದ್ದು,ಇತರ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
Comments