ಬಿಜೆಪಿ ಮುಖಂಡ ಮನೆ ಮೇಲೆ ಉಗ್ರರ ದಾಳಿ; ಪೊಲೀಸ್ ಪೇದೆ ಹತ್ಯೆ

01 Apr 2021 4:40 PM | Crime
1043 Report

ಬಿಜೆಪಿ ನಾಯಕರೊಬ್ಬರ ಮನೆಯ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಸಹಾಯಕ್ಕೆಂದು ತೆರಳಿದ್ದ ಪೊಲೀಸ್ ಪೇದೆ ರಾಮೀಜ್ ರಾಜಾ ಗಾಯಗೊಂಡಿದ್ದರು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಪರಿಶೀಲಿಸಿದ ವೈದ್ಯರು ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಬಾರಾಮುಲ್ಲಾದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಕುಪ್ವಾರಾ ಜಿಲ್ಲೆಯ ಉಸ್ತುವಾರಿ ಆಗಿರುವ ಮುಖಂಡ ಅನ್ವರ್ ಅಹ್ಮದ್ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರ ಈ ದಾಳಿಯನ್ನು ಬಿಜೆಪಿಯ ಕಾಶ್ಮೀರ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಮಂಜೂರ್ ಭಟ್ ಹೇಳಿದ್ದಾರೆ.

Edited By

venki swamy

Reported By

venki swamy

Comments