ಪಿಡಬ್ಲ್ಯುಡಿ ಎಂಜಿನಿಯರ್ ಮದ್ಯಪಾನ ಮಾಡಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ; ಪಾದಚಾರಿ ಸ್ಥಳದಲ್ಲೇ ಸಾವು

29 Mar 2021 11:54 AM | Crime
851 Report

ಲೋಕೋಪಯೋಗಿ ವಿಭಾಗದ (ಪಿಡಬ್ಲ್ಯುಡಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)ಭಾನುವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ಪಾದಚಾರಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆಸಿದ್ದು ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಮಂಗಳೂರು ಲೇಡಿಹಿಲ್‌ ಬಿಎಸ್‌ಎನ್‌ಎಲ್‌ ಸ್ಟಾಫ್‌ ಕ್ವಾಟ್ರಸ್​ ನಿವಾಸಿ ಆನಂದ್(‌62) ಮೃತ ದುರ್ದೈವಿ. ಮೂಲತಃ ಚಿಕ್ಕಮಗಳೂರಿನ ಹಸಹಳ್ಳಿಪೇಟೆಯ ಗಾಳಿಪೇಟೆ ನಿವಾಸಿಯಾದ ಆನಂದ್​, ಮಂಗಳೂರಿನ ಬಿಎಸ್‌ಎನ್‌ಎಲ್‌ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.  ಆರೋಪಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮಂಗಳೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಣ್ಮುಗಂ ಅವರನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿ 9.53ಕ್ಕೆ ಈ ಘಟನೆ ನಡೆದಿದ್ದು, ನಡೆದುಕೊಂಡು ಬರುತ್ತಿದ್ದ ಆನಂದ ಅವರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಢಿಕ್ಕಿಯ ರಭಸಕ್ಕೆ ಪಾದಚಾರಿ ಆನಂದ ಸುಮಾರು ದೂರದವರೆಗೆ ಎಗರಿ ಬಿದ್ದು ಸಾವನ್ನಪ್ಪಿದ್ದಾರೆ.

Edited By

venki swamy

Reported By

venki swamy

Comments