ದೀಪ್ ಸಿಧು ಬಗ್ಗೆ ಮಾಹಿತಿ ಕೊಟ್ರೆ 1 ಲಕ್ಷ ಬಹುಮಾನ..!
ನವದೆಹಲಿಯಲ್ಲಿ ಜನವರಿ 26ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್ ನಟ ಕಮ್ ಕಾರ್ಯಕರ್ತ ದೀಪ್ ಸಿಧು ಸೇರಿದಂತೆ ಇತರೆ 3 ಶಂಕಿತರ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳಿಗೆ ದೆಹಲಿ ಪೊಲೀಸರು ಬಹುಮಾನ ಘೋಷಣೆ ಮಾಡಿದ್ದಾರೆ.
ಧಾರ್ಮಿಕ ಬಾವುಟವೊಂದನ್ನು ಹಾರಿಸಿರುವ ಬಗ್ಗೆ ದಾಖಲಾಗಿರುವ ಕೇಸಿನಲ್ಲಿ ಮುಖ್ಯ ಆರೋಪಿಗಳಾಗಿದ್ದಾರೆ. ಈ ನಾಲ್ವರ ಬಂಧನಕ್ಕೆ ಸಹಕಾರಿಯಾಗುವ ಸುಳಿವನ್ನು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಅದೇ ಗಲಭೆ ಕೇಸಿನಲ್ಲಿ ಆರೋಪಿಗಳಾದ ಇತರ ನಾಲ್ಕು ಮಂದಿ - ಜಗ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಎಂಬುವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನು ನಿಗದಿಪಡಿಸಲಾಗಿದೆ.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಜ.26 ರಂದು ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪ್ರತಿಭಟನಾನಿರತ ಸಾವಿರಾರು ರೈತರು ಹಾಗೂ ಪೊಲೀಸರೊಂದಿಗೆ ಘರ್ಷನೆ ನಡೆಸಿದ್ದರು. ಪೊಲೀಸರನ್ನು ಬೆದರಿಸಿ, ಗಾಯಗೊಳಿಸಿ ಬಹಳಷ್ಟು ಪ್ರತಿಭಟನಾಕಾರರು ಹಾಗೂ ಟ್ರ್ಯಾಕ್ಟರ್ ಚಾಲಕರು ಅಕ್ರಮವಾಗಿ ಕೆಂಪು ಕೋಟೆ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದರು.
Comments